ಉಗ್ರರ ದಾಳಿ ವೇಳೆ ಗಾಯಗೊಂಡ ವ್ಯಕ್ತಿಯನ್ನು ಸಿಬ್ಬಂದಿಗಳು ಆಸ್ಪತ್ರೆಗೆ ಸಾಗಿಸುತ್ತಿರುವ ಚಿತ್ರ (ಫೋಟೋ ಕೃಪೆ: ನ್ಯೂಯಾರ್ಕ್ ಟೈಮ್ಸ್) 
ವಿದೇಶ

ಪ್ಯಾರೀಸ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: 150ಕ್ಕೂ ಹೆಚ್ಚು ಸಾವು

ಪ್ಯಾರೀಸ್ ನಲ್ಲಿ ಉಗ್ರರು ತಮ್ಮ ಅಟ್ಟಹಾಸವನ್ನು ಮತ್ತೆ ಮೆರೆದಿದ್ದು, ಉಗ್ರರ ಗುಂಡಿನ ದಾಳಿಗೆ 150 ಮಂದಿ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಮಂದಿ ಒತ್ತೆಯಾಳುಗಳಾಗಿ ಇರಿಸಿಕೊಂಡಿರುವುದಾಗಿ ಶನಿವಾರ ತಿಳಿದುಬಂದಿದೆ....

ಪ್ಯಾರೀಸ್: ಪ್ಯಾರೀಸ್ ನಲ್ಲಿ ಉಗ್ರರು ತಮ್ಮ ಅಟ್ಟಹಾಸವನ್ನು ಮತ್ತೆ ಮೆರೆದಿದ್ದು, ಉಗ್ರರ ಗುಂಡಿನ ದಾಳಿಗೆ 150 ಮಂದಿ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಮಂದಿ ಒತ್ತೆಯಾಳುಗಳಾಗಿ ಇರಿಸಿಕೊಂಡಿರುವುದಾಗಿ ಶನಿವಾರ ತಿಳಿದುಬಂದಿದೆ.

ಪ್ಯಾರೀಸ್ ಒಟ್ಟು 7 ಪ್ರದೇಶಗಳಲ್ಲಿ ಉಗ್ರರು ದಾಳಿ ನಡೆಸಿದ್ದು, ಫ್ರಾನ್ಸ್ ನ ಕ್ರೀಡಾಂಗಣದಲ್ಲಿ ಕಳೆದ ರಾತ್ರಿ ಜರ್ಮನಿ ಹಾಗೂ ಫ್ರಾನ್ಸ್ ಮಧ್ಯೆ ಫುಟ್ ಬಾಲ್ ನಡೆಯುತ್ತಿತ್ತು. ಪಂದ್ಯಾವಳಿ ವೀಕ್ಷಿಸಲು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಕೂಡ ಕ್ರೀಡಾಂಗಣಕ್ಕೆ ಆಗಮಿಸಿದ್ದರು. ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಕ್ರೀಡಾಂಗಣದ ಬಳಿ ಬಂದ ಇಬ್ಬರು ಉಗ್ರರು ಇದ್ದಕ್ಕಿದ್ದಂತೆ ಆತ್ಮಾಹುತಿ ಬಾಂಬ್ ಸ್ಪೋಟಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಹಲವು ಮಂದಿ ಸಾವನ್ನಪ್ಪಿದ್ದಾರೆಂದು ವರದಿಗಳು ತಿಳಿಸಿವೆ. ಕ್ಷಣಾರ್ಧದಲ್ಲಿ ಫ್ರಾನ್ಸ್ ಪ್ರಧಾನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಇದರಂತೆಯೇ ಫ್ರಾನ್ಸ್ ನ ಬಟಾಕ್ಲಾನ್ ಸಂಗೀತ ಗೋಷ್ಠಿಯಲ್ಲಿಯೂ ಉಗ್ರರು ತಮ್ಮ ಅಟ್ಟಹಾಸವನ್ನು ಮರೆದಿದ್ದು 1,500ಕ್ಕೂ ಹೆಚ್ಚು ಮಂದಿ ಇದ್ದ ಸಂಗೀತ ಕಚೇರಿಯೊಂದಕ್ಕೆ ನುಗ್ಗಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. ಗುಂಡಿನ ದಾಳಿಗೆ ಸ್ಥಳದಲ್ಲಿದ್ದ ಹಲವು ಮಂದಿ ಸಾವನ್ನಪ್ಪಿದ್ದು, 100 ಕ್ಕೂ ಹೆಚ್ಚು ಮಂದಿಯನ್ನು ಉಗ್ರರು ಒತ್ತೆಯಾಳುಗಳಾಗಿರಿಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಇದರಂತೆ ಪ್ಯಾರೀಸ್ ಭದ್ರತಾ ಸಿಬ್ಬಂದಿಗಳು ರಕ್ಷಣಾ ಕಾರ್ಯಾಚರಣೆಗಿಳಿದಿದ್ದು, ಈಗಾಗಲೇ ಇಬ್ಬರು ಉಗ್ರರು ಹೊಡೆದುರುಳಿಸಿದ್ದಾರೆ.

ಇನ್ನುಳಿದಂತೆ ಫ್ರಾನ್ಸ್ ನ ಕೆಲವು ಬಾರ್ ಹಾಗೂ ರೆಸ್ಟೋರೆಂಟ್ ಗಳ ಮೇಲೆಯೂ ಉಗ್ರರು ದಾಳಿಸಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ. ಒಟ್ಟಾರೆಯಾಗಿ ಫ್ರಾನ್ಸ್ ಮೇಲೆ ಕೆಂಗಣ್ಣು ಬೀರಿರುವ ಉಗ್ರರು ಪ್ರವಾಸಿಗರಂತೆ ನಟಿಸಿ ಯೋಜನೆಯಂತೆಯೇ ಏಕಕಾಲದಲ್ಲಿ ಒಟ್ಟು ಏಳು ಪ್ರದೇಶಗಳಲ್ಲಿ ದಾಳಿ ನಡೆಸಿದ್ದಾರೆ.

ಉಗ್ರರ ಈ ಭೀಕರ ದಾಳಿಯನ್ನು ಅಲ್ಲಿನ ಮಾಧ್ಯಮಗಳು 1945ರ ನೇ2 ಮಹಾಯುದ್ಧದ ನಂತರದ ದೊಡ್ಡ ದಾಳಿ ಎಂದು ವರದಿ ಮಾಡುತ್ತಿದ್ದು, ಘಟನೆ ಕುರಿತಂತೆ ಪ್ರಧಾನಮಂತ್ರಿ  ಫ್ರಾಂಕೋಯಿಸ್ ಹೊಲಾಂಡ್ ಅವರು ಈಗಾಗಲೇ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆಂದು ತಿಳಿದುಬಂದಿದೆ.

ದಾಳಿ ಹೊಣೆಹೊತ್ತ ಇಸಿಸ್
ಫ್ರಾನ್ಸ್ ನ 150 ಮಂದಿಯ ಮಾರಣಹೋಮ ಮಾಡಿದ ಘಟನೆ ಕುರಿತಂತೆ ಇದೀಗ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ ಉಗ್ರರ ಸಂಘಟನೆ ಹೊಣೆ ಹೊತ್ತುಕೊಂಡಿದ್ದು, ದಾಳಿ ನಡೆಸಿದ್ದು ನಾವೇ ಎಂದು ಹೇಳಿಕೊಂಡಿದೆ. ಈ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಉಗ್ರರ ಗುಂಪು, ಸಿರಿಯಾದಲ್ಲಿರುವ ಇಸಿಸ್ ನೆಲೆಗಳ ಮೇಲೆ ದಾಳಿ ನಡೆಸಿದ್ದ ಫ್ರಾನ್ಸ್ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ದಾಳಿ ನಡೆಸಿದೆವು ಎಂದು ಹೇಳಿಕೊಂಡಿದೆ.

ದಾಳಿ ನಡೆಸಿದ ಎಲ್ಲಾ ಉಗ್ರರ ಹತ

ಮೂಲಗಳ ಪ್ರಕಾರ ಕಳೆದ ರಾತ್ರಿಯಿಂದ ಫ್ರಾನ್ಸ್ ನ ಹಲವೆಡೆ ಗುಂಡಿನ ದಾಳಿ ನಡೆಸಿದ್ದ ಎಲ್ಲಾ 9 ಉಗ್ರರನ್ನು ಇದೀಗ ಫ್ರಾನ್ಸ್ ಭದ್ರತಾ ಸಿಬ್ಬಂದಿಗಳು ಹೊಡೆದುರುಳಿಸಿರುವುದಾಗಿ ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT