ಪ್ಯಾರಿಸ್: ಫ್ರಾನ್ಸ್ ನಲ್ಲಿ 129 ಜನರನ್ನು ಬಲಿ ತೆಗೆದುಕೊಂಡಿರುವ ಭಯೋತ್ಪಾದಕರ ದಾಳಿ ಇಷ್ಟಕ್ಕೇ ನಿಲ್ಲದೇ ಇನ್ನೂ ಮುಂದುವರೆಯಲಿದೆ ಎಂದು ಭಯೋತ್ಪಾದನೆ ಕುರಿತ ತಜ್ಞರೊಬ್ಬರು ಹೇಳಿದ್ದಾರೆ.
ಪ್ಯಾರಿಸ್ ನ ಸ್ಥಳಿಯ ಪತ್ರಿಕೆಗೆ ಹೇಳಿಕೆ ನೀಡಿರುವ ಮ್ಯಾಗ್ನಸ್ ರ್ಯಾನ್ಸ್ಟ್ರಾಪ್, ಚಾರ್ಲಿ ಹೆಬ್ಡೋ ಘಟನೆ ನಡೆದ ಬಳಿಕ ಫ್ರೆಂಚ್ ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚುಗೊಳಿಸುತ್ತಿರುವುದು, ಐಸೀಸ್ ಉಗ್ರರು ದಾಳಿ ಮಾಡಿರುವುದಕ್ಕೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುಮಾರು 2 ,000 ಕ್ಕೂ ಹೆಚ್ಚು ಫ್ರೆಂಚ್ ನಾಗರಿಕರು ಐಸೀಸ್ ನೊಂದಿಗೆ ಹೋರಾಟ ಮಾಡುತ್ತಿದ್ದು, ಇದು ಐಸೀಸ್ ನೊಳಗೆ ಯುರೋಪಿಯನ್ನರ ಮೂರನೆಯ ಒಂದು ಭಾಗವಾಗಿದೆ ಎಂದು ಮ್ಯಾಗ್ನಸ್ ಹೇಳಿದ್ದಾರೆ. ಕೆಲವು ದೇಶಗಳಿಂದ ಸಿರಿಯಾಗೆ ತೆರಳುವುದು ಕಷ್ಟದ ಕೆಲಸವಾಗಿದೆ. ಆದರೆ ಫ್ರಾನ್ಸ್ ನಲ್ಲಿ ಸಿರಿಯಾಗೆ ತೆರಳುವುದನ್ನು ಸುಲಭವಾಗಿದ್ದು, ಭಯೋತ್ಪಾದಕರ ದಾಳಿ ಇಷ್ಟಕ್ಕೇ ನಿಲ್ಲದೇ ಇನ್ನೂ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಯೋತ್ಪಾದನೆ ಕುರಿತ ತಜ್ಞರು ಹೇಳಿದ್ದಾರೆ.
ಉತ್ತರ ಆಫ್ರಿಕಾ ಮತ್ತು ಐಸಿಸ್ ಬಗ್ಗೆ ಬೇರೆಲ್ಲಾ ರಾಷ್ಟ್ರಗಳಿಗಿಂತಲೂ ಫ್ರಾನ್ಸ್ ಎಚ್ಚರಿಕೆಯಿಂದ ಇರಬೇಕಿದೆ ಎಂದು ಭಯೋತ್ಪಾದನೆ ಕುರಿತ ತಜ್ಞರು ಸಲಹೆ ನೀಡಿದ್ದಾರೆ.