ವಿದೇಶ

ಪ್ರವಾಸಿ ಭಾರತೀಯ ದಿವಸ್ ಗೆ ಫ್ರಾನ್ಸ್ ಭಯೋತ್ಪಾದಕರ ಕರಿ ನೆರಳು

Srinivas Rao BV

ಲಾಸ್ ಏಂಜಲೀಸ್: ಫ್ರಾನ್ಸ್ ನಲ್ಲಿ ನಡೆದಿರುವ ಭಯೋತ್ಪಾದಕರ ದಾಳಿ ಲಾಸ್ ಏಂಜಲೀಸ್ ನಲ್ಲಿ ನಡೆಯಬೇಕಿದ್ದ ಪ್ರವಾಸಿ ಭಾರತೀಯ ದಿವಸ್ ಮೇಲೆ ಕರಿ ನೆರಳು ಬೀರಿದೆ. ಪ್ರವಾಸಿ ಭಾರತೀಯ ದಿವಸ್ ನ್ನು ಉದ್ಘಾಟಿಸಬೆಕಿದ್ದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಮಾರ್ಗ ಮಧ್ಯದಿಂದಲೇ ವಾಪಸ್ಸಾಗಿದ್ದಾರೆ.
ನ.15 ರಿಂದ ಪ್ರಾದೇಶಿಕ ಪ್ರವಾಸಿ ಭಾರತೀಯ ದಿವಸ್ ಪ್ರಾರಂಭವಾಗಿದ್ದು, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಜನರು ಫ್ರಾನ್ಸ್ ನಲ್ಲಿ ನಡೆದಿರುವ ಭಯೋತ್ಪಾದಕ ದಾಳಿಯನ್ನು ಖಂಡಿಸಿ, ಉಗ್ರರ ದಾಳಿಗೆ ಬಲಿಯಾದ ಜನರಿಗೆ ಸಂತಾಪ ಸೂಚಿಸಿದ್ದರು. 
ಪ್ರವಾಸಿ ಭಾರತೀಯ ದಿವಸ್ ನ್ನು ಸುಷ್ಮಾ ಸ್ವರಾಜ್ ಉದ್ಘಾಟಿಸಬೇಕಿತ್ತು. ಆದರೆ ಉಗ್ರರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಅಮೆರಿಕಾಗೆ ತೆರಳುತ್ತಿದ್ದವರು ಮಾರ್ಗ ಮಧ್ಯದಿಂದಲೇ ನವದೆಹಲಿಗೆ ವಾಪಸ್ಸಾಗಿದ್ದಾರೆ. ಸುಷ್ಮಾ ಸ್ವರಾಜ್ ಬದಲಿಗೆ ವಿದೇಶಾಂಗ ಇಲಾಖೆ ರಾಜ್ಯ ಸಚಿವ ವಿ.ಕೆ ಸಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ 1,000 ಭಾರತೀಯ- ಅಮೆರಿಕನ್ನರು ಎರಡು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಮೆರಿಕದ ಸಂಸದರೊಬ್ಬರು ಫ್ರಾನ್ಸ್ ದಾಳಿ ಬಗ್ಗೆ ಮಾತನಾಡಿದ್ದು 2008 ರ ಮುಂಬೈ ದಾಳಿಯ ಮಾದರಿಯಲ್ಲೇ ದಾಳಿ ನಡೆಸಲಾಗಿದೆ ಎಂದು ಹೇಳಿದ್ದಾರೆ.

SCROLL FOR NEXT