ಸಿಲ್ವೆಸ್ಟರ್ (ಕೃಪೆ : ರಾಯಿಟರ್ಸ್ )
ಪ್ಯಾರೀಸ್: ಪ್ಯಾರೀಸ್‌ನಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ ದಾಳಿಯಲ್ಲಿ ಸಿಲ್ವೆಸ್ಟರ್ ಎಂಬ ಯುವಕ ಅದೃಷ್ಟದಿಂದ ಪಾರಾಗಿದ್ದಾನೆ. 126 ಮಂದಿಯ ಸಾವಿಗೆ ಕಾರಣವಾದ ಈ ದಾಳಿಯಲ್ಲಿ ಸಿಲ್ವೆಸ್ಟರ್ ನ್ನು ರಕ್ಷಿಸಿದ್ದು ಆತನ ಗ್ಯಾಲಕ್ಸಿ ಸ್ಮಾರ್ಟ್‌ಫೋನ್!
ಬಾಂಬ್ ದಾಳಿ ನಡೆಯುತ್ತಿದ್ದ ವೇಳೆ ಸ್ಫೋಟಕದ ಒಂದು ತುಂಡು ಸಿಲ್ವೆಸ್ಟರ್ ದೇಹವನ್ನು ಸ್ಪರ್ಶಿಸಿ ಗಾಯವನ್ನುಂಟು ಮಾಡಿದೆ. ಸ್ಫೋಟಕದ ತುಂಡು ತೀವ್ರ ವೇಗದಲ್ಲಿದ್ದರೂ, ಅದು ದೇಹಕ್ಕೆ ತಾಗಿ ದೊಡ್ಡ ಗಾಯವನ್ನುಂಟು ಮಾಡುವಂತೆ ತಡೆದದ್ದು ಆತನ ಕೈಯಲ್ಲಿದ್ದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 6 ಎಡ್ಜ್ ಸ್ಮಾರ್ಟ್ ಫೋನ್.
ಫ್ರಾನ್ಸ್ -ಜರ್ಮನಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ಸ್ಟೇಡಿಯಂ ಹೊರಗ ಸಿಲ್ವಸ್ಟರ್ ನಿಂತಿದ್ದಾಗ ಸ್ಫೋಟ ಸಂಭವಿಸಿದೆ. ಆ ವೇಳೆ ಸ್ಫೋಟಕದ ತುಂಡು ತನ್ನ ದೇಹವನ್ನು ತಾಕುವ ಮುನ್ನ ಸ್ಮಾರ್ಟ್‌ಫೋನ್‌ಗೆ ಬಂದು ಬಡಿದಿದೆ. ಸ್ಮಾರ್ಟ್‌ಫೋನ್ ಇಲ್ಲಿ ಆಪ್ತ ರಕ್ಷಕನಾಗಿದ್ದು, ಸಿಲ್ವೆಸ್ಟರ್ ದೇಹಕ್ಕೆ ಚಿಕ್ಕ ಪುಟ್ಟ ಗಾಯವಾಗಿದೆ .