ವಿದೇಶ

ವಿವಾದಕ್ಕೆ ಗುರಿಯಾಯ್ತು ಬಸವಣ್ಣ ಲಂಡನ್ ಪುತ್ಥಳಿ

Mainashree
ಬೆಂಗಳೂರು: ಲಂಡನ್‍ನ ಥೇಮ್ಸ್ ನದಿ ದಂಡೆಯಲ್ಲಿರುವ ಬಸವಣ್ಣನ ಪುತ್ಥಳಿ ಹಿಂದೆ ವಿವಾದ ಅಂಟಿಕೊಂಡಿದೆ. ಪುತ್ಥಳಿಯ ಕೆಳಭಾಗದಲ್ಲಿ ಬಸವಣ್ಣ ಅವರ ಜನ್ಮ ವರ್ಷ ಮತ್ತು ಮರಣ ವರ್ಷದಲ್ಲೇ ಏರುಪೇರಾಗಿದೆ. 
ಪುತ್ಥಳಿಯ ಕೆಳಭಾಗದಲ್ಲಿ ಬರೆದಿರುವ ಮಾಹಿತಿ ಪ್ರಕಾರ ಬಸವಣ್ಣ ಬದುಕಿದ್ದು ಕೇವಲ 34 ವರ್ಷ. ಆದರೆ ಎಂ.ಎಂ. ಕಲಬುರ್ಗಿ ಸೇರಿದಂತೆ ಹಿರಿಯ ಸಂಶೋಧಕರು ನಡೆಸಿರುವ ಸಂಶೋಧನೆ ಪ್ರಕಾರ ಬಸವಣ್ಣ ಬದುಕಿದ್ದುದು 62 ವರ್ಷ. 
ಅಂದರೆ, ಪುತ್ಥಳಿಯ ಕೆಳಭಾಗದಲ್ಲಿ ಕ್ರಿ.ಶ. 1134 ರಿಂದ ಕ್ರಿ.ಶ. 1168 ರ ವರೆಗೆ ಬಸವಣ್ಣ ಇದ್ದರು ಎಂದು ಬರೆಯಲಾಗಿದೆ. ಆದರೆ ನಿಜವಾಗಿ ಬಸವಣ್ಣ ಬದುಕಿದ್ದುದು 30-4-1134 ರಿಂದ 30-7-1196ರ ವರೆಗೆ.
ಇದರ ಪ್ರಕಾರ ಬಸವಣ್ಣ 62 ವರ್ಷ 7 ದಿನ ಬದುಕಿದ್ದರು. ಈ ಬಗ್ಗೆ ಖ್ಯಾತ ಸಂಶೋಧಕ ಎಂ ಎಂ ಕಲಬುರ್ಗಿ ಸಹ ಇದನ್ನೇ ಬರೆದಿದ್ದಾರೆ. ಅಲ್ಲದೇ ಕಲಬುರ್ಗಿ ಅವರ ಸಂಶೋಧನೆಯನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪುತ್ಥಳಿ ನಿರ್ಮಾಣದ ಹಿಂದಿನ ವ್ಯಕ್ತಿ ನೀರಜ್ ಪಟೇಲ್, ಎಲ್ಲ ಸಂಶೋಧನೆಗಳನ್ನು ನಡೆಸಿಯೇ ಬರೆಸಿದ್ದೇನೆ, ಅದರಲ್ಲಿ ತಪ್ಪೇನೂ ಇಲ್ಲ ಎಂದು ಸಮಸ್ಥಿಸಿಕೊಂಡಿದ್ದಾರೆ.
ಆದರೆ, ರಂಜಾನ್ ದರ್ಗಾ ಅವರು ಮಾತನಾಡಿ, ನೀರಜ್ ಪಟೇಲ್ ಅವರು ಬಸವಣ್ಣ ಹುಟ್ಟು ಮತ್ತು ಸಾವಿನ ಕುರಿತ ವಿಚಾರ ಬಿಟ್ಟು ಉಳಿದೆಲ್ಲಾ ಮಾಹಿತಿಯನ್ನು ತಮ್ಮ ಬಳಿ ಪಡೆದುಕೊಂಡಿದ್ದಾರೆ ಎಂದಿದ್ದಾರೆ. ಹೀಗಾಗಿ ತಾವು ಈ ವಿಚಾರವನ್ನು ತಾವು ಅವರಿಗೆ ಹೇಳಿಲ್ಲ ಎಂದು ತಿಳಿಸಿದ್ದಾರೆ.
SCROLL FOR NEXT