ಪ್ಯಾರಿಸ್: ಪ್ಯಾರಿಸ್ ದಾಳಿ ನಡೆಸಿದ ಇಸ್ಲಾಮಿಕ್ ಸ್ಟೇಟ್ ಸಂಘಟನೆಯೊಂದಿಗೆ ನಂಟು ಹೊಂದಿರುವ 5,500 ಟ್ವಿಟರ್ ಅಕೌಂಟ್‌ಗಳನ್ನು ರದ್ದು ಮಾಡಲಾಗಿದೆ ಎಂದು ಅನಾನಿಮಸ್ ಹ್ಯಾಕರ್ ಗ್ರೂಪ್ ಹೇಳಿದೆ.
ಕೆಲವೊಂದು ಟ್ವಿಟರ್ ಅಕೌಂಟ್‌ಗಳಲ್ಲಿ #daeshbags ಎಂಬ ಹ್ಯಾಶ್‌ಟ್ಯಾಗ್ ಬಳಸಲಾಗಿತ್ತು. Daesh ಎಂಬ ಪದದ ಅರ್ಥ ಹುಡುಕಿದಾಗ ಅದು ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಅರೇಬಿಕ್‌ನಲ್ಲಿರುವ ಸಂಕ್ಷಿಪ್ತ ರೂಪ ಎಂಬುದು ತಿಳಿದು ಬಂತು. ಈ ಹ್ಯಾಶ್‌ಟ್ಯಾಗ್ ಬಳಸಿರುವ ಅಕೌಂಟ್‌ಗಳನ್ನು ಕೂಡಲೇ ರದ್ದು ಮಾಡಲಾಯಿತು ಎಂದು ಅನಾನಿಮಸ್ ಹೇಳಿದೆ.
ಪ್ಯಾರಿಸ್ ದಾಳಿ ಹಿನ್ನಲೆಯಲ್ಲಿ ಇಸ್ಲಾಮಿಕ್ ಸ್ಟೇಟ್ ವಿರುದ್ಧ ಅನಾನಿಮಸ್ ಸೈಬರ್ ಯುದ್ಧ ಘೋಷಿಸಿತ್ತು.