ಪ್ಯಾರಿಸ್: ಕಳೆದ ಶುಕ್ರವಾರ ನಡೆದ ಪ್ಯಾರಿಸ್ ದಾಳಿ ಖಂಡಿಸಿ ಚಾರ್ಲಿ ಹೆಬ್ಡೋ ಪತ್ರಿಕೆ ವಿಶಿಷ್ಟವಾದ ಕಾರ್ಟೂನ್ ರಚಿಸಿ ಮತ್ತೆ ಸುದ್ದಿಗೆ ಗ್ರಾಸವಾಗಿದೆ.
ವಿಶಿಷ್ಟ ರೀತಿಯಲ್ಲಿ ಕಾರ್ಟೂನ್ ಅಥವಾ ಚಿತ್ರಗಳನ್ನು ಪ್ರಕಟಿಸಿ ವಿವಾದಕ್ಕೀಡಾಗಿದ್ದ ಚಾರ್ಲಿ ಹೆಬ್ಡೊ ಈ ಬಾರಿ ಪ್ಯಾರಿಸ್ ದಾಳಿ ಬಗ್ಗೆ ಖಂಡನೆ ವ್ಯಕ್ತ ಪಡಿಸಿ ಕಾರ್ಟೂನ್ ಒಂದನ್ನು ರಚಿಸಿದೆ. ಕೊಕೋ ಎಂಬ ಕಾರ್ಟೂನಿಸ್ಟ್ ಈ ಕಾರ್ಟೂನ್‌ನ್ನು ರಚಿಸಿದ್ದಾರೆ.
ಕೈಯಲ್ಲಿ ಶಾಂಪೇನ್ ಬಾಟಲಿ ಹಿಡಿದುಕೊಂಡು ಶಾಂಪೇನ್ ಹೀರುತ್ತಿರುವ ವ್ಯಕ್ತಿಯ ದೇಹದಿಂದ ಹಲವಾರು ರಂಧ್ರಗಳ ಮೂಲಕ ಶಾಂಪೇನ್ ಹೊರಗೆ ಬರುತ್ತಿರುವ ಕಾರ್ಟೂನ್ ನನ್ನು ಈ ಪತ್ರಿಕೆಯಲ್ಲಿ ಪ್ರಕಟಿಸಿದೆ. ಚಿತ್ರದ ಕೆಳಗೆ “Ils ont les armes on les emmerde on a le champagne!” ಎಂದು ಬರೆಯಲಾಗಿದೆ. ಅವರಲ್ಲಿ ಆಯುಧಗಳಿವೆ, ಆದರೇನಂತೆ ನಮ್ಮಲ್ಲಿ ಶಾಂಪೇನ್ ಇದೆ ಎಂಬುದು ಇದರರ್ಥ.
ಈ ಹಿಂದೆ ವಿವಾದಿತ ಚಿತ್ರ ಪ್ರಕಟಿಸಿದ್ದಕ್ಕಾಗಿ ಚಾರ್ಲಿ ಹೆಬ್ಡೋ ಮೇಲೆ ಜನವರಿಯಲ್ಲಿ ಉಗ್ರ ದಾಳಿ ನಡೆದಿತ್ತು. ಇದೀಗ ಈ ಹೊಸ ಕಾರ್ಟೂನ್ ಮೂಲಕ ಉಗ್ರರನ್ನು ಕೆಣಕುತ್ತಾ ಚಾರ್ಲಿ ಹೆಬ್ಡೋ ಮತ್ತೆ ಸುದ್ದಿಯಾಗಿದೆ.