ವಿದೇಶ

ಭಯೋತ್ಪಾದನಾ ನಿಗ್ರಹ ಸಹಕಾರದ ಬಗ್ಗೆ ಭಾರತ-ಚೀನಾ ಚರ್ಚೆ

Srinivas Rao BV

ಬೀಜಿಂಗ್: ಭಯೋತ್ಪಾದನೆ ವಿರುದ್ಧದ ಹೋರಾಟ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅಪರಾಧ ತಡೆಗಟ್ಟಲು ಭಾರತ-ಚೀನಾ ದ್ವಿಪಕ್ಷೀಯ ಸಹಕಾರ ಬಲಗೊಳ್ಳಬೇಕು ಎಂದು ಚೀನಾ ಅಧಿಕಾರಿ ಮೆಂಗ್ ಜಿಯಾಂಝು ಹೇಳಿದ್ದಾರೆ.
ಕಮ್ಯುನಿಷ್ಟ್ ಪಕ್ಷದ ರಾಜಕೀಯ ಮತ್ತು ಕಾನೂನು ವ್ಯವಹಾರಗಳ ಆಯೋಗದ ಮುಖ್ಯಸ್ಥರಾಗಿರುವ ಮೆಂಗ್ ಜಿಯಾಂಝ್, ಬೀಜಿಂಗ್ ನಲ್ಲಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದು, ಭಯೋತ್ಪಾದನೆ ನಿಗ್ರಹದ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಗಡಿ ಪ್ರವೇಶ ಮತ್ತು ನಿರ್ಗಮನದ ಆಡಳಿತ ಸುಧಾರಿಸಲು ಚೀನಾ-ಭಾರತ ಒತ್ತು ನೀಡಬೇಕು, ಈ ಮೂಲಕ ಗಡಿ ಭಾಗದಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗಲು ಪರಸ್ಪರ ಸಹಕರಿಸಬೇಕೆಂದು ಮೆಂಗ್ ಅಭಿಪ್ರಾಯಪಟ್ಟಿದ್ದಾರೆ. ಚೀನಾ ಸಲಹೆಗೆ ಪ್ರತಿಕ್ರಿಯೆ ನೀಡಿರುವ ರಾಜನಾಥ್ ಸಿಂಗ್, ಭಾರತ ಗೃಹ ಸಚಿವಾಲಯ ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಗೊಳಿಸಲು ಸಿದ್ಧವಿದೆ ಎಂದು ತಿಳಿಸಿದ್ದಾರೆ.

SCROLL FOR NEXT