ವಿದೇಶ

ಭಾರತ-ಮಲೇಷ್ಯಾ ಭದ್ರತೆ, ರಕ್ಷಣಾ ಸಹಕಾರ ವೃದ್ಧಿ: ಪ್ರಧಾನಿ

Lingaraj Badiger

ಪುತ್ರಜಯಾ: ಭಾರತ ಮತ್ತು ಮಲೇಷ್ಯಾ ಭದ್ರತೆ ಹಾಗೂ ರಕ್ಷಣಾ ಸಹಕಾರ ವೃದ್ಧಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಹೇಳಿದ್ದಾರೆ.

ಮೂರು ದಿನಗಳ ಮಲೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ಇತ್ತೀಚಿಗೆ ಜಾಗತಿಕ ಉಗ್ರ ದಾಳಿಗಳನ್ನು ಮತ್ತು ಭಾರತ ಹಾಗೂ ಅಪಫ್ಘಾನಿಸ್ತಾನ ವಿರುದ್ಧದ ದಾಳಿಗಳು ಜಾಗತಿಕ ಭಯೋತ್ಪಾದನೆಯನ್ನು ನೆನಪಿಸುತ್ತಿವೆ ಎಂದರು.

ಭಯೋತ್ಪಾದನೆಗೂ ಮತ್ತು ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ ಎಂದ ಪ್ರಧಾನಿ, ಉಗ್ರರ ವಿರುದ್ಧದ ಜಂಟಿ ಕಾರ್ಯಾಚರಣೆಯ ನಾಯಕತ್ವ ವಹಿಸಿಕೊಂಡ ಮಲೇಷ್ಯಾ ಪ್ರಧಾನಿ ನಜೀಬ್ ರಝಾಕ್ ಅವರನ್ನು ಅಭಿನಂದಿಸಿದರು.

'ನಮ್ಮ ಭದ್ರತಾ ಸಹಕಾರಕ್ಕಾಗಿ ನಿಮಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಕ್ಷಣಾ ಸವಾಲುಗಳನ್ನು ಎದುರಿಸಲು ಇದು ಸಹಾಕಾರಿಯಾಗಲಿದೆ. ರಕ್ಷಣೆ ಮತ್ತು ಭದ್ರತಾ  ಸಹಾಕರ ಮುಂದುವರೆಸುತ್ತೇವೆ' ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಹೇಳಿದರು.

ಭಯೋತ್ಪಾದನೆಯು ಜಗತ್ತಿಗೆ ಎದುರಾಗಿರುವ ಅತಿದೊಡ್ಡ ಸವಾಲು ಎಂದಿದ್ದ ಪ್ರಧಾನಿ ನರೇಂದ್ರ ಮೋದಿ, ಧರ್ಮ ಮತ್ತು ಭಯೋತ್ಪಾದನೆಯ ನಡುವಿನ ಬೆಸುಗೆಯನ್ನು ಜಾಗತಿಕ ಸಮುದಾಯ ತಿರಸ್ಕರಿಸಬೇಕು ಎಂದು ನಿನ್ನೆ ಕರೆ ನೀಡಿದ್ದರು.

SCROLL FOR NEXT