ಲಂಡನ್: ಮಿಲಿಟರಿಯವರು ಬಳಸುವ ಲೇಸರ್ ಲೈಟ್ ನ ತೀರ್ವತೆ ಯಾವ ಮಟ್ಟಿಗೆ ಇರುತ್ತದೆ ಎಂದರೆ ಲೇಸರ್ ಲೈಟ್ ನಿಂದಾಗಿ ವಿಮಾನ ಚಲಿಸುತ್ತಿದ್ದ ಪೈಲಟ್ ತನ್ನ ಕಣ್ಣಿನ ದೃಷ್ಟಿಯನ್ನೇ ಕಳೆದಕೊಂಡ ಘಟನೆ ಬ್ರಿಟೀಷ್ ಏರ್ ವೇಸ್ ನ ವಿಮಾನದಲ್ಲಿ ನಡೆದಿದೆ.
ಕಾಕ್ ಪಿಟ್ ನಲ್ಲಿ ಕಂಡು ಬಂದ ಲೇಸರ್ ಲೈಟ್ ನಿಂದ ಕೋ ಪೈಲಟ್ ತನ್ನ ದೃಷ್ಟಿಯನ್ನೇ ಕಳೆದುಕೊಳ್ಳಬೇಕಾಯಿತು. ಕೂಡಲೇ ಹೀಥ್ರೂ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಂಗ್ ಮಾಡಲಾಗಿದ್ದು, ಪೈಲಟನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾರಕ ಲೇಸರ್ ಪೈಲಟ್ ಕಣ್ಣಿನ ರೆಟಿನಾವನ್ನು ಸುಟ್ಟು ಹಾಕಿರುವ ಆಘಾತಕಾರಿ ಮಾಹಿತಿ ಪರೀಕ್ಷೆಯಲ್ಲಿ ಹೊರಬಿದ್ದಿದೆ.
ಇತ್ತೀಚಿನ ದಿನಗಳಲ್ಲಿ ನೆರೆಯ ಮಿಲಿಟರಿಯವರು ಪೈಲಟ್ ಗಳ ಮೇಲೆ ಲೇಸರ್ ದಾಳಿಯನ್ನು ತೀವ್ರಗೊಳಿಸಿದ್ದು, ಹಲವು ಬಾರಿ ಈ ರೀತಿ ನಡೆದಿದೆ. ಲೆಸರ್ ಪೆನ್ ಮೂಲಕ ಈ ದಾಳಿಗಳು ನಡೆಯುತ್ತಿವೆ ಎಂದು ಪೈಲಟ್ ಅಸೋಸಿಯೇಶನ್ ಹೇಳಿದೆ.