ವಿದೇಶ

ಅಪರೂಪದ ಬಿಳಿ ಖಡ್ಗಮೃಗದ ಸಾವು

Rashmi Kasaragodu
ಕ್ಯಾಲಿಫೋರ್ನಿಯ: ಅವುಗಳ ಸಂತತಿಯಲ್ಲಿ ಈ ಭೂಗ್ರಹದಮೇಲೆ ಉಳಿದುಕೊಂಡದ್ದೇ ಒಟ್ಟು 4 ಮಂದಿ. ಇದೀಗ ಆ ನಾಲ್ಕರಲ್ಲೂ ಒಂದು ಮರಣಹೊಂದಿದೆ. ಇದು ಅಳಿವಿನಂಚಿಗೆ ಬಂದಿರುವ ಬಿಳಿ ಖಡ್ಗಮೃಗದ ವಂಶ ನಿರ್ವಂಶವಾಗುತ್ತಿ ರುವ ದುಃಖದ ಸುದ್ದಿ. ಇನ್ನುಳಿದ ಮೂರು ಕೀನ್ಯಾದ ಒಲ್ ಪೆಜೆಟಾದಲ್ಲಿವೆ. ಸ್ಯಾನ್ ಡೀಗೋ ಪ್ರಾಣಿಸಂಗ್ರಹಾಲಯದ ಸಫಾರಿ ಪಾರ್ಕ್‍ನಲ್ಲಿ ಬ್ಯಾಕ್ಟೀರಿಯಾ ಸೋಂಕಿನಿಂದ ನರಳುತ್ತಿದ್ದ, ವೃದ್ಧ ಬಿಳಿ ಖಡ್ಗಮೃಗ ಕೊನೆಯುಸಿರೆಳೆದಿರುವುದಾಗಿ ಅಧಿಕಾರಿವರ್ಗ ದೃಢಪಡಿಸಿದೆ. 41 ವರ್ಷ ವಯಸ್ಸಿನ ಈ ಪ್ರಾಣಿ 1989ರಿಂದ ಕ್ಯಾಲಿಫೋರ್ನಿಯ ಪಾರ್ಕ್‍ನಲ್ಲಿತ್ತು. ಕರುಳು ಸಂಬಂಧಿ ಕಾಯಿಲೆ ಉಲ್ಬಣಿಸಿ, ನ.13ರಂದು  ನಡೆದ ಶಸ್ತ್ರಉಚಿಕಿತ್ಸೆಯೂ ಫಲಕಾರಿಯಾಗದೇ ಖಡ್ಗಮೃಗ ಸಾವನ್ನಪ್ಪಿದೆ. ಸುಮಾರು 1, 800ಕೆಜಿ ತೂಕದ ಈ ಮೃಗ ಕೇವಲ ಕ್ಯಾಲಿಫೋರ್ನಿಯ ಮÁತ್ರವಲ್ಲ ವಿಶ್ವಾದ್ಯಂತ ಅಪರೂಪದ ಪ್ರಾಣಿಯೆಂದೇ ಖ್ಯಾತವಾಗಿತ್ತು. ಈ ಪ್ರಾಣಿಯ ಕೋಡುಗಳಿಗೆ ಕಾಳಸಂತೆ ಯಲ್ಲಿ ಭಾರಿ ಬೆಲೆಯಿದ್ದು, ಔಷಧೀಯ ಗುಣಗಳೂ ಇರುವುದೆಂದು ತಿಳಿದುಬಂದಿದೆ. ಉಳಿದಿರುವ ಮೂರು ಬಿಳಿಖಡ್ಗಮೃಗಗಳ ಮೂಲಕ ಸಂತತಿ ಹೆಚ್ಚಿಸಲಾಗದಿದ್ದರೆ, ಇನ್ನು  ಕೆಲವೇ ವರ್ಷಗಳಲ್ಲಿ ಈ ಪ್ರಾಣಿವಂಶ ಸಂಪೂರ್ಣ ಮಯವಾಗಲಿದೆ ಎಂದುತಜ್ಞರು ಅಭಿಪ್ರಾಯಪಟ್ಟದ್ದಾರೆ. 
SCROLL FOR NEXT