ಫೇಸ್ಬುಕ್ ವ್ಯವಸ್ಥೆಯನ್ನು ಬೇಸ್ತು ಬೀಳಿಸಿದ ವ್ಯಕ್ತಿ(ಚಿತ್ರ ಕೃಪೆ: ಫೇಸ್ ಬುಕ್)
ವಿಯೇಟ್ನಾಂ: ತನ್ನ ವಿಚಿತ್ರ ಹೆಸರಿನ ಕಾರಣಕ್ಕೆ ಎರಡು ದಿನಗಳ ಹಿಂದೆ ಜಗತ್ತಿನಾದ್ಯಂತ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದ ಫೇಸ್ ಬುಕ್ ಖಾತೆಯೊಂದು ಇದೀಗ ನಕಲಿ ಎಂದು ಸಾಬೀತಾಗಿದೆ.
ಆಸ್ಟ್ರೇಲಿಯದ ಫ್ಯೂ ದಟ್ ಬಿಕ್ ಎಂಬ ಹೆಸರಿನ ವ್ಯಕ್ತಿ ಅದು ತನ್ನ ಅಸಲಿ ನಾಮವೆಂದೂ ಆದರೆ ಅದನ್ನು ಇಂಗ್ಲೀಷ್ ಅಕ್ಷರಗಳಲ್ಲಿ ಬರೆದು ಓದಿಕೊಂಡಾಗ ಅದು ಅಶ್ಲೀಲ ಬಯ್ಗುಳದ ಅರ್ಥ ನೀಡುವುದು ಕೇವಲ ಕಾಕತಾಳೀಯವೆಂದೂ ಗೋಳು ಹೇಳಿಕೊಂಡಿದ್ದ, ಆದರೆ ಇದೀಗ ಅದು ನಕಲಿ ಹೆಸರೆಂದು ಆತನೇ ಖುದ್ದು ಹೇಳಿಕೊಂಡಿದ್ದಾನೆ.
ಆ ಮೂಲಕ ಮಾಧ್ಯಮ ಗಳನ್ನು ಹಾಗೂ ಫೇಸ್ಬುಕ್ ವ್ಯವಸ್ಥೆಯನ್ನು ಬೇಸ್ತು ಬೀಳಿಸಿದ್ದಾನೆ. ತನ್ನ ವಿಚಿತ್ರ ಕಾರಣ ದಿಂದಲೇ ಹತ್ತಾರು ಬಾರಿ ಪ್ರಯತ್ನಿಸಿದರೂ ಖಾತೆ ಬ್ಲಾಕ್ ಆಗಿತ್ತೆಂದೂ, ಕೊನೆಗೆ ಪಾಸ್ ಪೋರ್ಟ್ ಪ್ರತಿಯನ್ನು ಸಾಕ್ಷಿ ಯನ್ನಾಗಿ ನೀಡಿ ಖಾತೆಯನ್ನು ಅಧಿಕೃತಗೊಳಿಸಿ ಕೊಂಡೆ ಎಂದು ಕಥೆ ಕಟ್ಟಿದಾತ ಈಗ ಆ ಹೆಸರಿನ ಖಾತೆಯನ್ನು ಶಾಶ್ವತವಾಗಿ ಮುಚ್ಚಿದ್ದಾನೆ.
ತನ್ನ ಅಸಲಿ ನಾಮ ಜೋಯೆಲ್ ಕಾರ್ ಹೆಸರಿನಲ್ಲಿ ಖಾತೆಯನ್ನೂ ತೆರೆದಿದ್ದಾನೆ.
ಫೇಸ್ಬುಕ್ನ ನೇಮ್ ಪಾಲಿಸಿ ಮತ್ತು ಮಾಧ್ಯಮಗಳ ಸುದ್ದಿದಾರಿದ್ರ್ಯ ಜಾಹೀರು ಮಾಡಲು ಹೀಗೆ ಮಾಡಿದ್ದೆನೆಂದೂ ಹೇಳಿಕೊಂಡಿದ್ದಾನೆ! ಆದರೆ ಈತನ ಈ ಹುಚ್ಚಾಟಕ್ಕೆ ಟೀಕೆಗಳು ವ್ಯಕ್ತವಾಗಿವೆ. ಏತನ್ಮಧ್ಯೆ ಅದೇ ಹೆಸರಿನ ಇನ್ನೆರಡು ಖಾತೆಗಳೂ ಫೇಸ್ ಬುಕ್ನಲ್ಲಿ ಚಾಲನೆಗೊಂಡಿವೆ. ಅವುಗಳ ಅಧಿಕೃತತೆ ಇನ್ನಷ್ಟೇ ಸಾಬೀತಾಗಬೇಕಿದೆ ಎಂದು `ದ ಇಂಡಿಪೆಂಡೆಂಟ್' ವರದಿ ಮಾಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics