ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ವಿದೇಶ

ಎಚ್1ಬಿ ವೀಸಾ ಶುಲ್ಕ ರದ್ದು

ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ದೊಡ್ಡ ನಿರಾಳ ತಂದಿದೆ. ಅಮೆರಿಕ ಸರ್ಕಾರ ಭಾರತದಿಂದ ಆಗಮಿಸುವ ವೃತ್ತಿಪರರಿಗೆ ನೀಡುವ ವೀಸಾ ಮೇಲೆ ವಿಧಿಸುತ್ತಿದ್ದ ಶುಲ್ಕವನ್ನು ರದ್ದುಗೊಳಿಸಿದೆ...

ಎಚ್1ಬಿ ವೀಸಾ (ಸಂಗ್ರಹ ಚಿತ್ರ)
Srinivasa Murthy VN
Updated On : 3 Oct 2015, 11:36 am

ವಾಷಿಂಗ್ಟನ್: ಭಾರತದ ಮಾಹಿತಿ ತಂತ್ರಜ್ಞಾನ ಕಂಪನಿಗಳಿಗೆ ದೊಡ್ಡ ನಿರಾಳ ತಂದಿದೆ. ಅಮೆರಿಕ ಸರ್ಕಾರ ಭಾರತದಿಂದ ಆಗಮಿಸುವ ವೃತ್ತಿಪರರಿಗೆ ನೀಡುವ ವೀಸಾ ಮೇಲೆ ವಿಧಿಸುತ್ತಿದ್ದ  ಶುಲ್ಕವನ್ನು ರದ್ದುಗೊಳಿಸಿದೆ.

ಅಮೆರಿಕದ ಕಾಂಗ್ರೆಸ್‍ನಲ್ಲಿ ಬಹುಮತ ಹೊಂದಿರುವ ರಿಪಬ್ಲಿಕನ್ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪ್ರತಿ ಎಚ್1ಬಿ ವೀಸಾಗೆ ಅಮೆರಿಕದ 2,000 ಡಾಲರ್(ಸುಮಾರು ರು.1.20 ಲಕ್ಷ) ಶುಲ್ಕ  ವಿಧಿಸುತ್ತಿತ್ತು. ಇದು ಭಾರತದ ಐಟಿ ಕಂಪನಿಗಳಿಗೆ ಭಾರಿ ಹೊರೆಯಾಗಿತ್ತು. ಭಾರತದ ಕಂಪನಿಗಳು ಈ ವರ್ಷ ಮಾತ್ರವೇ ಎಚ್1ಬಿ ವೀಸಾ ಶುಲ್ಕವಾಗಿ ಸುಮಾರು ರು.2,330 ಕೋಟಿವರೆಗೂ  ಪಾವತಿಸಿವೆ.

ಅಮೆರಿಕ ಸರ್ಕಾರದ ಈ ನೀತಿ ವಿರುದ್ಧ ಭಾರತದ ಐಟಿ ಕಂಪನಿಗಳು, ಕೇಂದ್ರ ಸರ್ಕಾರ ಸತತವಾಗಿ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದವು. ಭಾರತೀಯ ಐಟಿ ಕಂಪನಿಗಳ ಒಕ್ಕೂಟ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಚರ್ಚೆಗೆ ಎತ್ತಿಕೊಂಡಿತ್ತು. ಅಮೆರಿಕ ವಿಧಿಸುತ್ತಿರುವ ಈ ಶುಲ್ಕ ನ್ಯಾಯಸಮ್ಮತವಲ್ಲ ಎಂದು ನಾಸ್ಕಾಂ ಅಧ್ಯಕ್ಷ ಆರ್.ಚಂದ್ರಶೇಖರ್ ಇತ್ತೀಚೆಗೆ  ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments