ಲಂಡನ್: ಮಾತುಕತೆಗೆ ಸಂಬಂಧಿಸಿ ಪಾಕ್ ಮುಂದಿಟ್ಟಿರುವ ಪ್ರಸ್ತಾಪವನ್ನು ಭಾರತ ಇಂದಲ್ಲ ನಾಳೆ ಗಂಭೀರವಾಗಿ ಪರಿಗಣಿಸುತ್ತದೆ ಎನ್ನುವವಿಶ್ವಾಸವಿದೆ ಎಂದು ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಇತ್ತೀಚೆಗೆ ಷರೀಫ್ ಎರಡೂ ದೇಶಗಳ ನಡುವಿನ ಬಿಕ್ಕಟ್ಟು ನಿವಾರಣೆಗೆ 4 ಸೂತ್ರಗಳನ್ನು ಭಾರತದ ಮುಂದಿಟ್ಟಿದ್ದರು. ಸಮುಚಿತ, ಪ್ರಾಯೋಗಿಕವಾದ ಈ ಪ್ರಸ್ತಾಪವನ್ನು ಭಾರತ ಇಂದಲ್ಲ, ನಾಳೆ ಗಂಭೀರವಾಗಿ ಪರಿಗಣಿಸುತ್ತದೆ ಎಂದು ನಂಬಿದ್ದಾಗಿ ಎಂದು ಷರೀಫ್ ತಿಳಿಸಿದ್ದಾರೆ. ಇದೇ ವೇಳೆ ಪಾಕ್‍ನಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾರತದ ಪಾತ್ರವೂ ಇದೆ ಎಂಬುದಕ್ಕೆ ನಮ್ಮ ಬಳಿ ಸಾಕ್ಷ್ಯಾಧಾರಗಳಿವೆ ಎಂದೂ ಷರೀಫ್ ಇದೇ ವೇಳೆ ಹೇಳಿಕೊಂಡಿದ್ದಾರೆ.