ವಿದೇಶ

ನೇಪಾಳ ಪ್ರಧಾನಿ ಸ್ಥಾನಕ್ಕೆ ಕೊಯಿರಾಲ ರಾಜಿನಾಮೆ, ನಾಳೆ ನೂತನ ಪ್ರಧಾನಿ ಆಯ್ಕೆ

Lingaraj Badiger

ಕಠ್ಮಂಡು: ಹೊಸ ಸಂವಿಧಾನ ಅನುಷ್ಠಾನಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ನೇಪಾಳ ಪ್ರಧಾನಿ ಸುಶಿಲ್ ಕೊಯಿರಾಲ ಅವರು ಶನಿವಾರ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಸಂಸತ್ ನಾಳೆ ನೇಪಾಳದ ನೂತನ ಪ್ರಧಾನಿಯನ್ನು ಆಯ್ಕೆ ಮಾಡಲಿದೆ.

ಕೊಯಿರಾಲ ಅವರು ಅಧ್ಯಕ್ಷ ರಾಮ ಬರನ್ ಯಾದವ್ ಅವರಿಗೆ ರಾಜಿನಾಮೆ ಸಲ್ಲಿಸಿದ್ದು, ರಾಜಿನಾಮೆ ಅಂಗೀಕರಿಸಿದ ಯಾದವ್, ನೂತನ ಪ್ರಧಾನಿ ಆಯ್ಕೆಯಾಗುವವರೆಗೆ ಅಧಿಕಾರದಲ್ಲಿ ಮುಂದುವರೆಯುವಂತೆ ಸೂಚಿಸಿದ್ದಾರೆ.

ಕೊಯಿರಾಲ ಅವರು ಇಂದು ಔಪಚಾರಿಕವಾಗಿ ರಾಜಿನಾಮೆ ನೀಡಿದ್ದಾರೆ. ಆದರೆ ಅವರು ಸಹ ಮುಂದಿನ ಪ್ರಧಾನಿ ರೇಸ್‌ನಲ್ಲಿದ್ದು, ನಾಳೆ ನೂತನ ಪ್ರಧಾನಿ ಆಯ್ಕೆಗೆ ಸಂಸತ್ತಿನಲ್ಲಿ ಮತದಾನ ನಡೆಯಲಿದೆ.

ಕೊಯಿರಾಲ ಅವರು ನೇಪಾಳ ಕಾಂಗ್ರೆಸ್(ಎನ್‌ಸಿ) ಪಕ್ಷದಿಂದ ನೇಪಾಳ ಕಮ್ಯುನಿಷ್ಟ ಪಕ್ಷದ ಮುಖ್ಯಸ್ಥ ಕೆಪಿ ಶರ್ಮಾ ಓಲಾ ಅವರ ವಿರುದ್ಧ ಪ್ರಧಾನಿ ಸ್ಥಾನಕ್ಕೆ ಸ್ಫರ್ಧಿಸಿದ್ದಾರೆ.

SCROLL FOR NEXT