ನವದೆಹಲಿ: ಏಡ್ಸ್ ನಿಯಂತ್ರಣ ಕಾರ್ಯಕ್ರಮಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದಾಗಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ವೇತನ ನೀಡಿಕೆಯನ್ನೂ ವಿಳಂಬಗೊಳಿಸಿರುವುದರಿಂದಾಗಿ ಹೆಚ್‍ಐವಿ ಪೀಡಿತ ಭಾರತೀಯರ ಸಂಖ್ಯೆಯಲ್ಲಿ ಏರಿಕೆ ಕಾಣುವ ಸಂಭವ ಹೆಚ್ಚಾಗಿದೆ ಎಂದು ಏಷ್ಯಾ ಮತ್ತು ಪೆಸಿಫಿಕ್ ವಿಶ್ವಸಂಸ್ಥೆಯ ಏಡ್ಸ್ ನಿಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ.
10 ವರ್ಷಗಳಿಂದ ಉತ್ತಮ ಕಾರ್ಯಕ್ರಮ ನಡೆಸಿಕೊಂಡು ಬಂದು ಜಾಗತಿಕ ಮನ್ನಣೆ ಗಳಿಸಿದ್ದ ಭಾರತ ತನ್ನದೇ ತಪ್ಪಿನಿಂದಾಗಿ ಮತ್ತೆ ಅಪಾಯ ಆಹ್ವಾನಿಸಿ ಕೊಳ್ಳಲಿದೆ ಎಂದು ಸಂಸ್ಥೆ ಹೇಳಿದೆ. ಫೆಬ್ರವರಿ ಯಲ್ಲಿ ಕೇಂದ್ರಸರ್ಕಾರ, ವಿಶ್ವಸಂಸ್ಥೆಯ ಏಡ್ಸ್ ಬಜೆಟ್ ಹಣದಲ್ಲಿ ಕಡಿತಗೊಳಿಸಲು ಮನವಿ ಮಾಡಿದ್ದಲ್ಲದೆ ರಾಜ್ಯಸರ್ಕಾರಗಳು ಈ ಕೊರತೆ ಭರಿಸಬೇಕೆಂದು ಕೋರಿತ್ತು. ಆದರೆ ರಾಜ್ಯಗಳು ನಿರ್ಲಕ್ಷ್ಯ ವಹಿಸಿದ್ದವು.