ಬರ್ಲಿನ್: ಭಾರತೀಯ ಮೂಲದ ರಾಜಕಾರಣಿ ಅಶೋಕ್ ಶ್ರೀಧರನ್, ಜರ್ಮನಿಯ ಬಾನ್ ನಗರದ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಶ್ರೀಧರನ್ ತಂದೆ ಭಾರತೀಯ ಮೂಲದವರು ಮತ್ತು ತಾಯಿ ಜರ್ಮನಿಯವರು. ಜರ್ಮನಿಯ ಚಾನ್ಸಲರ್ ಏಂಜೆಲಾ ಮರ್ಕೆಲ್ ಪ್ರತಿನಿಧಿಸುತ್ತಿರುವ ಕ್ರಿಶ್ಚಿಯನ್ ಪ್ರಜಾಪ್ರಭುತ್ವ ಒಕ್ಕೂಟದ ಸದಸ್ಯರಾಗಿರುವ ಅಶೋಕ್, ಸೆ.30ರಂದು ನಡೆದ ಪೌರ ಚುನಾವಣೆಯಲ್ಲಿ ಶೇ.50.06 ಮತಗಳನ್ನು ಗಳಿಸಿ ಮೇಯರ್ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಎದುರಾಳಿ ಪಕ್ಷ ಸೋಶಿಯಲ್ ಡೆಮೊಕ್ರಟಿಕ್ ಪಾರ್ಟಿ 21 ವರ್ಷಗಳಿಂದ ನಗರವನ್ನು ಆಳಿತ್ತು. ಗುರುವಾರ ಅಶೋಕ್ ಪ್ರಮಾಣವಚನ ಸ್ವೀಕರಿಸಿದರು.