ನ್ಯೂಯಾರ್ಕ್: ಭಾರತದಿಂದ ಅಮೆರಿಕಾಗ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ಭಾರತೀಯರನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದಾರೆ.
ಭಾರತದ ನೀಲೇಶ್‌ಕುಮಾರ್ ಪಟೇಲ್ (41) ಹಾಗೂ ಹರ್ಷದ್ ಮೆಹ್ತಾ (65) ಬಂಧಿತ ಆರೋಪಿಗಳು. ಇವರು ಭಾರತದಲ್ಲಿ ಅಪಹರಣ ಮಾಡಲಾಗುತ್ತಿದ್ದ ವ್ಯಕ್ತಿಗಳನ್ನು ಅಮೆರಿಕಾಗೆ ಖಾಸಗಿ ವಿಮಾನಗಳ ಮೂಲಕ ಕಳ್ಳಸಾಗಣೆ ಮಾಡುತ್ತಿದ್ದರು.
ಈ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದು, ಗುರುವಾರ ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು ಎಂದು ತಿಳಿದು ಬಂದಿದೆ.