ಲಂಡನ್: ಬ್ರಿಟನ್‍ನ ಹೊಸ ವಲಸೆ ನೀತಿಯಿಂದಾಗಿ ಕೆಲಸ ಕಳೆದುಕೊಳ್ಳುವ ಆತಂಕ ಎದುರಿಸುತ್ತಿರುವ ನರ್ಸ್‍ಗಳಿಗೊಂದು ಖುಷಿಯ ಸುದ್ದಿ. ನರ್ಸಿಂಗ್ ಅನ್ನು ಕೊರತೆ ಎದುರಿಸುತ್ತಿರುವ ವೃತ್ತಿಗಳ ಪಟ್ಟಿಗೆ ಬ್ರಿಟನ್ ಸೇರಿಸಿದೆ.
ಈ ನಿರ್ಧಾರದಿಂದಾಗಿ ಕೆಲಸ ಕಳೆದುಕೊಳ್ಳಬಹುದಾದ ಆತಂಕ ಎದುರಿಸುತ್ತಿದ್ದ 30 ಸಾವಿರಕ್ಕೂ ಹೆಚ್ಚು ವಿದೇಶಿ ನರ್ಸ್‍ಗಳಿಗೆ ನೆಮ್ಮದಿ ಸಿಗಲಿದೆ. ಇವರಲ್ಲಿ ಏಳು ಸಾವಿರಕ್ಕೂ ಹೆಚ್ಚು ಮಂದಿ ಭಾರತೀಯರಾಗಿದ್ದಾರೆ. ಬ್ರಿಟನ್‍ನ ರಾಷ್ಟ್ರೀಯ ಆರೋಗ್ಯ ಸೇವೆ ಇತ್ತೀಚೆಗೆ ಕನಿಷ್ಠ ವಾರ್ಷಿಕ 35 ಸಾವಿರ ಪೌಂಡ್ ಆದಾಯ ಗಳಿಸುವ ನರ್ಸ್‍ಗಳಿಗಷ್ಟೇ ಬ್ರಿಟನ್‍ನಲ್ಲಿ ನೆಲೆಸಲು ಅವಕಾಶ ನೀಡಲಾಗುವುದು ಎಂದು ಹೇಳಿತ್ತು. ಸಾಮಾನ್ಯವಾಗಿ ಇಷ್ಟು ವೇತನ ಕೇವಲ ಹಿರಿಯ ನರ್ಸ್ ಗಳಿಗಷ್ಟೇ ನೀಡಲಾಗುತ್ತದೆ. ಇದರಿಂದ ಭಾರತೀಯ ಮೂಲದ ಸಾವಿರಾರು ನರ್ಸ್ ಗಳು ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದರು.