ಬ್ರಿಟನ್‍ನ ಮಾಜಿ ಪ್ರಧಾನಿ ಟೋನಿ ಬ್ಲೇರ್
ಲಂಡನ್: ಹನ್ನೆರಡು ವರ್ಷಗಳ ಹಿಂದೆ ಅಂದರೆ ಇರಾಕ್ ಮೇಲೆ ನಡೆಸಿದ ದಾಳಿಯಲ್ಲಿ ಹಲವು ಪ್ರಮಾದಗಳಾಗಿವೆ. ಐಎಸ್ ಉಗ್ರರ ಹುಟ್ಟಿಗೂ ದಾಳಿ ಕಾರಣವಾಯ್ತು ಎಂದು ಬ್ರಿಟನ್‍ನ ಮಾಜಿ ಪ್ರಧಾನಿ ಟೋನಿ ಬ್ಲೇರ್ ಕ್ಷಮೆಯಾಚಿಸಿದ್ದಾರೆ. ಸಿಎನ್‍ಎನ್ ಟಿವಿ ವಾಹಿನಿಯ ಫರೀದ್ ಝಕಾರಿಯಾ ಅವರಿಗೆ ನೀಡಿದ ಸಂದರ್ಶನದಲ್ಲಿ ಬ್ಲೇರ್ ಈ ಸತ್ಯಬಿಚ್ಚಿಟ್ಟಿದ್ದಾರೆ. ಇರಾಕ್ ಯುದಟಛಿದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ವೈಫಲ್ಯ ಕುರಿತುಇದೇ ಮೊದಲ ಬಾರಿಗೆ ಅವರು ಮನಬಿಚ್ಚಿ ಮಾತನಾಡಿದ್ದಾರೆ. ಸದ್ದಾಂ ಹುಸೇನ್ ಸರ್ಕಾರ ಸಮೂಹನಾಶಕ ಶಸ್ತ್ರಾಸ್ತ್ರ ಹೊಂದಿದೆ ಎಂದು ಬೇಹುಗಾರರು ನೀಡಿದ್ದ ಮಾಹಿತಿ ತಪ್ಪಾ ಗಿತ್ತು. ರಾಸಾಯನಿಕ ಅಸ್ತ್ರಗಳನ್ನು ಸದ್ದಾಂ ವೈರಿಗಳ, ಪ್ರಜೆಗಳ ಮೇಲೆ ಬಳಸಿದ್ದರೂ ನಮ್ಮ ಬಳಿ ಇದ್ದ ಚಿತ್ರಣದಂತೆ ಅಲ್ಲಿನ ಪರಿಸ್ಥಿತಿ ಇರಲಿಲ್ಲ ಎಂದು ಬ್ಲೇರ್ ಒಪ್ಪಿಕೊಂಡಿದ್ದಾರೆ.
ಇರಾಕ್ ಮೇಲಿನ ದಾಳಿಯಲ್ಲಿ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್‍ರಿಗೆ ಬ್ಲೇರ್ ಜತೆಗಾರರಾಗಿದ್ದರು. ದಾಳಿಗೆ ಸಮರ್ಥನೆ ಯಾಗಿ ಅಮೆರಿಕ ಹಾಗೂ ಬ್ರಿಟನ್ ಸದ್ದಾಂನ ಸಮೂಹನಾಶಕ
ಅಸ್ತ್ರಗಳ ಬಳಕೆಯನ್ನು ಮುಂದೊಡ್ಡಿದ್ದವು. ಆದರೆ ಈ ಮಾಹಿತಿ ತಪ್ಪು ಎಂಬುದು ನಂತರ ಗೊತ್ತಾಗಿತ್ತು.ದಾಳಿ ಬಳಿಕ ಇರಾಖ್ ನಲ್ಲಿ ಪ್ರಜಾದಂಗೆ, ಅಲ್‍ಖೈದಾದಂಥ ಉಗ್ರ ಸಂಘಟನೆಗಳ ಹುಟ್ಟು ಸಂಭವಿಸಿದ್ದವು. ಈಗ ಹಾವಳಿ ಎಬ್ಬಿಸುತ್ತಿರುವ ಐಎಸ್ ಉಗ್ರರ ಹುಟ್ಟಿಗೂ 2003ರ ದಾಳಿಯೇ ಮೂಲ. ಸಾವಿರಾರು ಇರಾಕಿ ಪ್ರಜೆಗಳಶು , 4000 ಅಮೆರಿಕನ್ ಯೋಧರು, 180 ಬ್ರಿಟನ್ ಯೋಧರು ಇರಾಕ್ ಯುದ್ಧದಲ್ಲಿ ಮೃತಪಟ್ಟಿದ್ದರು. ದಾಳಿ ಕುರಿತು ಹೋದಲ್ಲೆಲ್ಲ ಬ್ಲೇರ್, ಬುಷ್ ಟೀಕೆ ಎದುರಿಸುತ್ತಿದ್ದಾರೆ. ಯುದ್ಧದ ಯೋಜನೆಯಲ್ಲಿ ಸಂಭವಿಸಿದ ತಪ್ಪುಗಳಿಗೆ ಹಾಗೂ ಒಂದು ಆಡಳಿತವನ್ನು ಕಿತ್ತೆಸೆದಾಗ ಏನೇನು ಅನರ್ಥಗಳಾಗುತ್ತವೆ ಎಂಬ ಕುರಿತು ನಮಗಿದ್ದ ತಪ್ಪು ತಿಳಿವಳಿಕೆಗೆ ಕ್ಷಮೆ ಯಾಚಿಸುತ್ತೇವೆ ಎಂದು ಹೇಳಿರುವ ಬ್ಲೇರ್, ಸದ್ದಾಂ ಹುಸೇನ್ ಪದಚ್ಯುತಿಗೆಮಾತ್ರ ವಿಷಾದಿಸಿಲ್ಲ. ಸದ್ದಾಂ ಕೆಳಗಿಳಿಸಿದ್ದಕ್ಕೆ ಬೇಸರವಿಲ್ಲ. ಇಂದೂ ಆತ ಇಲ್ಲದಿರುವುದೇ ಚೆನ್ನ ಎನಿಸುತ್ತದೆಂದು ಹೇಳಿದ್ದಾರೆ. ಸದ್ದಾಂ ಇರಾಕ್‍ನಲ್ಲಿ 3 ದಶಕಗಳ ನಿರಂಕುಶಾಧಿಪತ್ಯ ನಡೆಸಿದ್ದರು. ಈಗಿನ ಐಎಸ್ ಉಗ್ರರ ಜನನಕ್ಕೆ ಅಂದಿನ ದಾಳಿಯ ಕೆಲ ನೈಜಅಂಶಗಳು ಕಾರಣ. ಆದರೆ 2015ರಲ್ಲಿ ತಲೆದೋರಿರುವ ಪರಿಸ್ಥಿತಿಗೆ ನಾವು ಕಾರಣವಲ್ಲ. 2011ರಲ್ಲಿ ನಡೆದ ಅರಬ್ ಕ್ರಾಂತಿಯೂ ಇರಾಕ್‍ನ ಇಂದಿನ ಸ್ಥಿತಿಗೆ ಒಂದು ಕಾರಣ.
ಐಎಸ್‍ನ ಮೂಲ ಇರುವುದು ಸಿರಿಯಾದಲ್ಲೇ ಹೊರತು ಇರಾಕ್ ನಲ್ಲಲ್ಲ. ಪಶ್ಚಿಮದ ದೇಶಗಳಲ್ಲಿ ಯಾವ ವಿದೇಶ ನೀತಿ ಅನುಸರಿಸ ಬೇಕೆಂಬ ದ್ವಂದ್ವ ಇದೆ. ಇರಾಕ್‍ನಲ್ಲಿ ಮಧ್ಯಪ್ರವೇಶಹಾಗೂ ಸೇನಾದಾಳಿ, ಲಿಬಿಯಾದಲ್ಲಿ ಮಧ್ಯಪ್ರವೇಶ, ಸಿರಿಯಾದಲ್ಲಿ ಕೇವಲ ಒತ್ತಡವನ್ನು ಮಾತ್ರ ನಾವು ಪ್ರಯೋಗಿಸಿದ್ದೇವೆ. ಪರ್ಯಾಯ ಮಾರ್ಗಗಳು ಕೆಲಸ ಮಾಡಿವೆ ಎಂದಿದ್ದಾರೆ ಬ್ಲೇರ್. ನಿಮ್ಮನ್ನು `ಯುದ್ಧಾಪರಾಧಿ' ಎಂಬಂತೆ ಕಾಣಲಾಗುತ್ತಿರುವುದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂಬ ಪ್ರಶ್ನೆಗೆ ಅವರು, ಅಂದಿನ ಕಾಲಕ್ಕೆ ಯಾವುದು ಸೂಕ್ತವಾಗಿತ್ತೋ ಅದನ್ನು ಮಾಡಿದ್ದೇನೆ. ಪ್ರತಿಯೊಬ್ಬರಿಗೂ ಅವರದೇ ನ್ಯಾಯ ತೀರ್ಮಾನಗಳಿರುತ್ತವೆ ಎಂದು ಉತ್ತರಿಸಿದ್ದಾರೆ ಬ್ಲೇರ್.