ವಿದೇಶ

ಪಾಕಿಸ್ತಾನದಿಂದ ತಾಲಿಬಾನ್ ಉಗ್ರರ ಬಳಕೆ

Mainashree

ವಾಷಿಂಗ್ಟನ್: ಸಿಐಎ ನಿರ್ದೇಶಕ ಜಾನ್ ಬ್ರೆನ್ನಾನ್‍ರ ಇ-ಮೈಲ್ ಹ್ಯಾಕ್ ಮಾಡಿ ಪ್ರಕಟಿಸಿರುವ ವಿಕಿಲೀಕ್ಸ್ ಮಹತ್ವದ ಸುದ್ದಿಯೊಂದನ್ನು ಬಹಿರಂಗಗೊಳಿಸಿದೆ. 

ಅಪ್ಘಾನಿಸ್ತಾನದ ಮೇಲಿನ ಭಾರತದ ಪ್ರಭಾವವನ್ನು ಕುಗ್ಗಿಸಲು ಪಾಕ್ ತಾಲಿಬಾನ್ ಉಗ್ರರನ್ನು ಪ್ರಾಕ್ಸಿಗಳನ್ನಾಗಿ ಬಳಸುತ್ತಿರುವುದನ್ನು ಜಾನ್ ಬ್ರೆನ್ನಾನ್ ತಮ್ಮ ಇ-ಮೇಲ್ ನಲ್ಲಿ ಬರೆದಿರುವುದು ಇದೀಗ ಜಗಜ್ಜಾಹೀರಾಗಿದೆ. 
ಪಾಕ್ ಮತ್ತು ಅಪ್ಘಾನಿಸ್ತಾನದ ಬಗೆಗಿನ ವರದಿಗಳು ಹಾಗೂ ಇರಾನ್ ಬಗ್ಗೆ ಅಮೆರಿಕದ ಹಾಕಿರುವ ಯೋಜನೆಗಳೂ ಬಹಿರಂಗವಾಗಿದೆ. 2008ರಲ್ಲಿ ಒಬಾಮಾ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಮೂರುದಿನಗಳ ನಂತರ ಬ್ರೆನ್ನಾನ್ ಈ ಇ-ಮೇಲ್ ಕಳಿಸಿದ್ದು, ಭಾರತವನ್ನು ಕಟ್ಟಿಹಾಕಲು ತಾಲಿಬಾನ್ ಉಗ್ರರನ್ನು ಬಳಸುತ್ತಿದೆ ಎಂಬ ವಿಷಯ ಉಲ್ಲೇಖಿಸಲಾಗಿತ್ತು.
SCROLL FOR NEXT