ಬಾಲಿ: ಇಂಡೋನೇಷಿಯಾದ ಬಾಲಿ ದ್ವೀಪದಲ್ಲಿ ಬಂಧಿಸಲ್ಪಟ್ಟಿರುವ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ಛೋಟಾ ರಾಜನ್ ಮರಳಿ ಭಾರತಕ್ಕೆ ಬರಲು ಬಯಸಿದ್ದಾನಂತೆ.
ರಾಜನ್ ವಿರುದ್ದ ಮುಂಬಯಿಯಲ್ಲಿ 71 ಕೊಲೆ ಕೇಸುಗಳು, ಮಾದಕ ವಸ್ತುಗಳ ಕಳ್ಳ ಸಾಗಣೆ, ಸೇರಿದಂತೆ ಹಲವು ಪ್ರಕರಣಗಳು ಛೋಟಾ ರಾಜನ್ ವಿರುದ್ಧ ದಾಖಲಾಗಿವೆ. ಈ ಮೊದಲು ಜಿಂಬಾಬ್ವೆಗೆ ತೆರಳಲು ಬಯಸಿದ್ದ ಛೋಟಾ ರಾಜನ್ ಈಗ ಭಾರತಕ್ಕೆ ವಾಪಾಸ್ ಕಳುಹಿಸುವಂತೆ ಕೇಳಿದ್ದಾನೆ.
ಇನ್ನು ಭಾರತಕ್ಕೆ ವಾಪಸ್ ಕಳುಹಿಸಿದರೇ ಅಲ್ಲಿ ಆತನನ್ನು ಕೊಲ್ಲುವ ಸಾದ್ಯತೆಯಿದೆ ಎಂದು ಬಾಲಿ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.
ಇನ್ನು ಸುದ್ದಿಗಾರರೊಂದಿಗೆ ಮಾತನಾಡಿರುವ ಛೋಟಾ ರಾಜನ್ ನನಗೆ ಜಿಂಬಾಬ್ವೆಗೆ ಹೋಗಲು ಇಷ್ಟವಿಲ್ಲ, ನಾನು ಭಾರತಕ್ಕೆ ಹೋಗಲು ಅವಕಾಶ ಕಲ್ಪಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.