ವಾಷಿಂಗ್ಟನ್: ಇನ್ನುಮುಂದೆ ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಬೆಂಬಲ ಸಿಗುವುದಿಲ್ಲ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜನಾಭಿಪ್ರಾಯಕ್ಕೆ ಒಪ್ಪಿಗೆ ನೀಡುವ ಸಾಧ್ಯತೆ ಕಡಿಮೆ ಎಂದು ಅಮೆರಿಕದಲ್ಲಿರುವ ಪಾಕ್ ಮಾಜಿ ರಾಯಭಾರಿ ಹೇಳಿದ್ದಾರೆ.
'ಕಾಶ್ಮೀರ ವಿವಾದ ಪಾಕಿಸ್ತಾನದಲ್ಲಿ ಒಂದು ಭಾವನಾತ್ಮಕ ವಿಚಾರವಾಗಿರುವುದರಿಂದ ಅಲ್ಲಿಯ ನಾಯಕರು ಈ ವಿಚಾರವನ್ನು ಜನತೆಗೆ ತಿಳಿಸುವಲ್ಲಿ ವಿಫಲರಾಗಿದ್ದಾರೆ' ಎಂದು ಮಾಜಿ ರಾಯಭಾರಿ ಹುಸೇನ್ ಹಖ್ಖನಿ ಅವರು ತಿಳಿಸಿದ್ದಾರೆ.
ಮಾತುಕತೆಯ ಮೂಲಕ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಕೆಲವು ವರ್ಷಗಳ ಕಾಲ ಪಾಕಿಸ್ತಾನಕ್ಕೆ ಅಂತರಾಷ್ಟ್ರೀಯ ಬೆಂಬಲ ಸಿಕ್ಕಿತ್ತು. ಆದರೆ ಪಾಕ್ ಈಗ ಅದಕ್ಕೆ ಬದ್ಧವಾಗಿಲ್ಲ. ಹೀಗಾಗಿ ಅಂತರಾಷ್ಟ್ರೀಯ ಬೆಂಬಲ ಕಳೆದುಕೊಂಡಿದೆ ಎಂದಿದ್ದಾರೆ.
ಪಾಕ್ ಬೆಂಬಲಿತ ಭಯೋತ್ಪಾನೆ ನಿಲ್ಲುವವರೆಗೆ ಕಾಶ್ಮೀರ ವಿವಾದ ಕುರಿತು ಭಾರತ ಸಹ ಮಾತುಕತೆಗೆ ಒಪ್ಪುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.