ವ್ಲಾದಿಮಿರ್ ಪುಟಿನ್ 
ವಿದೇಶ

ರಷ್ಯಾದಲ್ಲಿನ ರೆಸಾರ್ಟ್ ಜಿಮ್ ನಲ್ಲಿ ಪುಟಿನ್ ವರ್ಕೌಟ್

ವದಂತಿ ಇಲ್ಲದಿದ್ರೆ ಜನರಿಗೆ ನಾವು ಬೋರಾಗುತ್ತೇವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಮಾತಿನಂತೆ ಬದುಕುತ್ತ ಕೆಲವು ವರುಷಗಳಾದವು. ರಷ್ಯಾದ ಯಾವ ಫಿಲ್ಮ್ ಸ್ಟಾರ್ ...

ವದಂತಿ ಇಲ್ಲದಿದ್ರೆ ಜನರಿಗೆ ನಾವು ಬೋರಾಗುತ್ತೇವೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಈ ಮಾತಿನಂತೆ ಬದುಕುತ್ತ ಕೆಲವು ವರುಷಗಳಾದವು. ರಷ್ಯಾದ ಯಾವ ಫಿಲ್ಮ್ ಸ್ಟಾರ್ , ಟೆನ್ನಿಸ್ ಹಾಟ್ ತಾರೆ ಮಾರಿಯಾ ಶರಪೋವಾ ಅವರಿಗೂ ಸವಾಲೊಡ್ಡುವ, ಅವರಿಗಿಂತ ಗಾಸಿಪ್ ಹುಟ್ಟಿಸಬಲ್ಲ, ಗ್ಲ್ಯಾಮರಸ್ ಆಗಿರಬಲ್ಲ ಪುಟಿನ್ ಈಗೆರಡು ದಿನದಿಂದ ರೆಸಾರ್ಟ್ ಹೊಕ್ಕಿದ್ದಾರೆ. ಅದು ಕಪ್ಪುಸಮುದ್ರದ ದಡದಲ್ಲಿರುವ ರಷ್ಯಾದ ಸೋಚಿ ನಗರ. ಪ್ರಧಾನಿ ಡಿಮಿಟ್ರಿ ಮೆಡ್ವೆಡಾವ್ ಜೊತೆ ರಾಜತಾಂತ್ರಿಕ ಚರ್ಚೆಗಾಗಿ ಇಬ್ಬರಷ್ಟೇ ಅಲ್ಲಿ
ಉಳಿದ್ದಾರೆ. ಆದರೆ, ಈ ಚರ್ಚೆಗಿಂತ ಪುಟಿನ್ ಸುದ್ದಿ ಆಗ್ತಿರೋದು ಬೇರೆಯದ್ದೇ ಕಾರಣಕ್ಕೆ. ತಾವೇ ಸ್ವತಃ ಟೀ ಮಾಡುತ್ತಾ, ಅಡುಗೆ ಮಾಡುತ್ತಾ, ಜಿಮ್ ನ ಸೈಕಲ್ ತುಳಿಯುತ್ತಾ ಕೊಟ್ಟ ಹತ್ತಾರು ಥರ ಪೋಸುಗಳು ಈಗ ಸೋಷಿಯಲ್ ಮೀಡಿಯಾಗಳಲ್ಲಿ ಸೆನ್ಸೇಷನ್.

ನೀವು ನಂಬಲ್ಲ ವಿಶ್ವದ ಯಾವ ಅಧ್ಯಕ್ಷರೂ  ಇವರಷ್ಟು ರಂಗುರಂಗಾಗಿಲ್ಲ. ಈ ಹಿಂದೆ `ಪುಟಿನ್ ಪುನಃ ಅಧ್ಯಕ್ಷರಾಗಲು ನಾನು ನಗ್ನಳಾಗಿ ಪ್ರಚಾರ ಮಾಡ್ತೀನಿ' ಎಂದಿದ್ದಳು ಡಯಾನಾ ಎಂಬ ರೂಪದರ್ಶಿ. ಅದಕ್ಕೂ ಕಾರಣ, ಪುಟಿನ್ ದಯಪಾಲಿಸಿದ ಒಳ್ಳೆಯ ಆಡಳಿತವಲ್ಲ. ಸದಾ ಅಟ್ರ್ಯಾಕ್ಟ್ ಆಗಿರುವ ಅವರ ವ್ಯಕ್ತಿತ್ವ. 3 ತಿಂಗಳ ಹಿಂದೆ ಇದ್ದಕ್ಕಿದ್ದಂತೆ ನಾಪತ್ತೆ ಆಗಿ, 10 ದಿನದ ಬಳಿಕ ಪ್ರತ್ಯಕ್ಷರಾಗಿದ್ದರು. ಪ್ರೇಯಸಿಯನ್ನು ಕಾಣಲು ಸ್ವಿಜರ್ಲೆಂಡಿಗೆ ಹೋಗಿದ್ದಾರೆ, ಐಸಿಸ್ ಉಗ್ರರ ವಿರುದ್ಧ ಹೋರಾಡಲು ಹೋಗಿದ್ದಾರೆ ಅಂತೆಲ್ಲ ವದಂತಿಗಳು ಆಗ ಎದ್ದಿದ್ದವು. ಇವರ ನಾಪತ್ತೆ ಪ್ರಕರಣಗಳಿಗೆಲ್ಲ ಕಾರಣ ಇವರೊಳಗಿನ ಹವ್ಯಾಸಗಳು. ಇವರ ಹಾಬಿಗಳ ಬಗ್ಗೆ ಜೋಕುಗಳೂ ಉಂಟು. ಅವೇನು ಗೊತ್ತಾ?

`ಮತದಾರರನ್ನು ಸೆಳೆಯಲೂ ಪುಟಿನ್ ಗಾಳ'!
 ವೀಕೆಂಡ್ ಬಂದ್ರೆ ಮಾಸ್ಕೋದಿಂದ ಸೈಬೀರಿಯಾದತ್ತ ಇವರ ಪ್ರೈವೇಟ್ ಜೆಟ್ ಹೊರಡುತ್ತೆ. ಅಲ್ಲಿನ ಟೈವಾ ವಲಯದ ನದಿಯಲ್ಲಿ ರೀಲು ರಾಡು ಹಿಡಿದು ಗಂಟೆಗಟ್ಟಲೆ ಮೀನು ಹಿಡಿಯಲು ಕೂರುತ್ತಾರೆ ಪುಟಿನ್. ಸಣ್ಣಪುಟ್ಟ ಮೀನು ಸಿಕ್ಕರೆ ಪುನಃ ನದಿಗೆ ಬಿಟ್ಟು, ದೊಡ್ಡ ಮೀನಿನೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ತಾರೆ. ಒಮ್ಮೆ 21 ಕೆಜಿಯ ಮೀನು ಹಿಡಿದು ಪೋಸು ಕೊಟ್ಟಿದ್ದು ದೊಡ್ಡ ಸುದ್ದಿಗೆ ಕಾರಣ ಆಗಿತ್ತು. 7 ಥರದ ಫಿಶ್ ಖಾದ್ಯ ಮಾಡ್ತಾರೆ ಪುಟಿನ್. ಹಾಗೆ ಟೈವಾಕ್ಕೆ ಹೋದಾಗ ಅಲ್ಲಿನ ಹಿಮಸಾರಂಗಗಳ ಮೈದಡವದೆ ವಾಪಸಾಗಲ್ಲ.

`ಪುಟಿನ್ ಅತ್ಯದ್ಭುತ ಜಲಚರ'
ಪುಟಿನ್ ಒಳ್ಳೆಯ ಈಜುಪಟು. ಮೈ ಕೊರೆವ ಐಸ್ ವಾಟರ್‍ನಲ್ಲಿ 2 ತಾಸು ಈಜಬಲ್ಲರು. ಬಟರ್ ಫ್ಲೈ ಟೆಕ್ನಿಕ್ ಇಷ್ಟದ ಈಜು. ಟೈವಾದ ನದಿಯಲ್ಲಿ 3 ಕಿ. ಮೀ. ಈಜಿದ್ದು ಇವರ ಇದುವರೆಗಿನ ದಾಖಲೆ. ಮರ ಏರುವುದರಲ್ಲೂ ಪುಟಿನ್ ನಿಸ್ಸೀಮರು. `ರಷ್ಯಾ ವಿರುದ್ಧ ಯಾರೂ ಗೆಲ್ಲಕ್ಕಾಗಲ್ಲ' ಕಾರಣ, ಪುಟಿನ್ ಚೆನ್ನಾಗಿ ಜೂಡೋ ಆಡಬಲ್ಲರು. ಈ ಕುಸ್ತಿಯಲ್ಲಿ ಇವರಿಗೆ ಬ್ಲ್ಯಾಕ್ ಬೆಲ್ಟೂ ಸಿಕ್ಕಿದೆ. 14ನೇ ವಯಸ್ಸಿನಿಂದಲೇ ಇವರು ಮಾರ್ಷಿಯಲ್ ಆರ್ಟ್ ಕಲಿತವರು. ಹುಟ್ಟೂರು ಲೆನಿನ್‍ಗ್ರ್ಯಾಡ್‍ನಲ್ಲಿ ಹಲವು ಜೂಡೋ ಚಾಪಿಯನ್‍ಶಿಪ್‍ಗಳನ್ನು ಗೆದ್ದಿದ್ದಾರೆ. ಪುಟಿನ್ ಒಮ್ಮೆ ಜಪಾನಿಗೆ ಹೋದಾಗ ಅಲ್ಲಿನ ಕೊಡಕಾನ್ ಇನ್‍ಸ್ಟಿಟ್ಯೂಟ್‍ನಲ್ಲಿ ಹಲವು ಜೂಡೋ ಟೆಕ್ನಿಕ್ ಗಳನ್ನು ಪ್ರದರ್ಶಿಸಿದ್ದರು. ಅಂದಹಾಗೆ, ಪುಟಿನ್ 77 ಕೆ.ಜಿ. ಇದ್ದಾರೆ.

`ಪುಟಿನ್ ಬಹುಬೇಗನೆ ಎಸ್ಕೇಪ್ ಆಗ್ತಾರೆ' ಪುಟಿನ್ 6 ಕುದುರೆಗಳನ್ನು ಸಾಕಿಕೊಂಡಿದ್ದಾರೆ. ಬೆಟ್ಟಗುಡ್ಡಗಳಲ್ಲಿ ಕುದುರೆ ಸವಾರಿ ಗೊತ್ತು. ಉಕ್ರೇನ್ ಜೊತೆಗಿನ ಮೀಟಿಂಗಿಗೆ ಒಮ್ಮೆ ಮೋಟಾರ್ ಬೈಕಿನಲ್ಲೇ ಹೋದವರು. ಸಾಗರದಡಿಯಲ್ಲಿ ಮಿನಿ ಸಬ್‍ಮರಿನ್ ಡ್ರೈವ್ ಮಾಡಬಲ್ಲರು. ನೀರಿನ ಮೇಲೆ ಮೋಟಾರ್ ಬೋಟನ್ನೂ ಓಡಿಸ್ತಾರೆ. ಹಿಮದ ಗುಡ್ಡಗಳಲ್ಲಿ ಸ್ಕೀಯಿಂಗ್ ಆಡ್ತಾರೆ. ಅಲ್ಲದೆ, ಸ್ನೋ ಮೊಬೈಲನ್ನು ಅತಿವೇಗದಲ್ಲಿ ಓಡಿಸ್ತಾರೆ. ಆಕಾಶದಲ್ಲಿ ಸೂಪರ್ ಸಾನಿಕ್ ಜೆಟ್ ಅನ್ನೂ ಓಡಿಸಬಲ್ಲರು. ಸೈನಿಕರೆಲ್ಲ ಸತ್ರೂ ಪುಟಿನ್ ಒಬ್ರೇ ಹೋರಾಡ್ತಾರೆ ಪುಟಿನ್ ಅದ್ಭುತ ಶಿಕಾರಿಪಟು. ಸೈಬೀರಿಯಾದ ಕಾಡುಗಳಲ್ಲಿ ಅಂಗಿಬಿಚ್ಚಿ, ಕೋವಿ ಹಿಡಿದು ಅನೇಕ ಪ್ರಾಣಿಗಳನ್ನು ಹೊಡೆದುರುಳಿಸಿದ್ದಾರೆ. ಒಂದು ಹುಲಿಯನ್ನು ಕೊಂದು, ಫೋಟೋ ಕ್ಲಿಕ್ಕಿಸಿಕೊಂಡು ವಿವಾದಕ್ಕೂ ಈಡಾಗಿದ್ದರು. ಪುಟಿನ್ ಕೈಯಲ್ಲಿ ನೂರಾರು ಸ್ಮಾರ್ಟ್ ವೆಪನ್‍ಗಳಿವೆ. ಹುಲಿ ಕೊಂದವನಿಗೆ ಮನುಷ್ಯನ ಬೇಟೆ ದೊಡ್ಡದಾ? `ಯಾರೇ ರಷ್ಯನ್ ಮಿಸ್ಸಾದ್ರೂ ಪುಟಿನ್‍ಗೆ ಗೊತ್ತಾಗುತ್ತೆ!'

ಹಿಮದಲ್ಲಿ ಪೋಲಾರ್ ಕರಡಿ, ಕಾಡಿನಲ್ಲಿ ಹುಲಿಗಳಿಗೆ, ನೀರಿನ ಮೇಲೆ ವೇಲ್ಸ್ ಮೀನುಗಳಿಗೆ ಸ್ವತಃ ತಾವೇ ಕಾಲರ್ ಐಡಿ ಹಾಕಿಸಿ, ಅವುಗಳ ಚಲನವಲನ ವೀಕ್ಷಿಸಿದ್ದಾರೆ ಪುಟಿನ್. ಇನ್ನು ಯಾವ ರಷ್ಯನ್ ಅನ್ನು ಇವರು ಸುಮ್ಮನೆ ಬಿಟ್ಟಿದ್ದಾರೆಂಬ ಅನುಮಾನ ಕೆಲವರಿಗಂತೆ!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT