ವಿದೇಶ

ಟರ್ಕಿ ಬೀಚಿನಲ್ಲಿ 3 ವರ್ಷದ ಸಿರಿಯಾ ನಿರಾಶ್ರಿತ ಮೃತ ಬಾಲಕನ ಫೋಟೊಗೆ ಕಂಬನಿ ಮಿಡಿದ ವಿಶ್ವ

Guruprasad Narayana

ಅಂಕಾರ: ಮೂರು ವರ್ಷದ ಸಿರಿಯನ್ ಕುರ್ಡ್ ಬಾಲಕ ಆಯ್ಲಾನ್ ಕುರ್ಡಿ, ಸಮುದದಲ್ಲಿ ಮುಳುಗಿ ಟರ್ಕಿಯಾ ಬೋಡ್ರಮ್ ಬೀಚಿನಲ್ಲಿ ಮೃತಪಟ್ಟು ಬಿದ್ದಿದ್ದ ಈ ಚಿತ್ರ ವಿಶ್ವದ ಅಸಂಖ್ಯಾತ ಜನರ ಮನ ಕಲಕಿದೆ.

೧೧ ಜನ ಸಿರಿಯನ್ ನಿರಾಶ್ರಿತರು ಟರ್ಕಿಯಿಂದ ಗ್ರೀಸ್ ದ್ವೀಪಕ್ಕೆ ತೆರಳುತ್ತಿದ್ದ ಹಡಗು ಮುಳುಗಿ ಒಬ್ಬ ಬಾಲಕನ ಮೃತ ದೇಹ ಟರ್ಕಿಯ ಬೀಚಿಗೆ ತೇಲಿ ಬಂದಿದೆ.

ಯೂರೋಪಿಯನ್ ದೇಶಗಳಿಗೆ ವಲಸೆ ತೆರಳುವ ನಿರಾಶ್ರಿತರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವುದು ಇದೇ ಮೊದಲೇನಲ್ಲ. ಈ ವರ್ಷದ ಜನವರಿಯಿಂದ ಮೆಡಿಟರೇನಿಯನ್ ಸಮುದ್ರ ದಾಟಲು ಪ್ರಯತ್ನಿಸಿ ೨೬೦೦ ಕ್ಕೂ ಹೆಚ್ಚು ವಲಸಿಗರು ಮೃತಪಟ್ಟಿದ್ದಾರೆ ಎಂದು ಅಂತರಾಷ್ಟ್ರೀಯ ವಲಸಿಗರ ಸಂಸ್ಥೆ ತಿಳಿಸಿದೆ.

ಆದರೆ ಈ ಒಂದು ಚಿತ್ರ ವಿಶ್ವದಾದ್ಯಂತ ಜನರನ್ನು ಕಲಕಿದ್ದು, ಸಿರಿಯಾ ನಿರಾಶ್ರಿತರ ವಿಷಯ ಮತ್ತೆ ಮುಂಚೂಣಿಗೆ ಬಂದಿದೆ. ಈ ವಲಸಿಗರಿಗೆ ಆಶ್ರಯ ನೀಡಲು ಯಾವುದೇ ಯೂರೋಪಿಯನ್ ದೇಶ ಮುಂದೆ ಬಾರದೆ ಇರುವುದು ಮಾನವೀಯತೆಯ ಸಾವು ಎಂದು ವಿಶ್ವದಾದ್ಯಂತ ಹಲವಾರು ಸಾಮಾಜಿಕ ಕಾರ್ಯಕರ್ತರು ಕಿಡಿಕಾರಿದ್ದಾರೆ.

 

SCROLL FOR NEXT