ಶ್ಯಾನನ್ ನ್ಯೂಮನ್ ನವದಂಪತಿ (ಚಿತ್ರ ಕೃಪೆ: SHANNON NEUMAN/FACEBOOK) 
ವಿದೇಶ

ಡೈವೋರ್ಸ್‍ಗೆ ಸೆಲ್ಫಿ ನಗು!

ಆಗ ತಾನೇ ದಾಂಪತ್ಯಕ್ಕೆ ಕಾಲಿಟ್ಟು ಹೊಸ ಬದುಕಿನ ಪಯಣ ಆರಂಭಿಸುವ ಜೋಡಿಗಳು ಸೆಲ್ಫಿ ತೆಗೆದುಕೊಳ್ಳುತ್ತಾ ಖುಷಿಪಡುವುದನ್ನು...

ಟೊರೆಂಟೋ: ಆಗ ತಾನೇ ದಾಂಪತ್ಯಕ್ಕೆ ಕಾಲಿಟ್ಟು ಹೊಸ ಬದುಕಿನ ಪಯಣ ಆರಂಭಿಸುವ ಜೋಡಿಗಳು ಸೆಲ್ಫಿ ತೆಗೆದುಕೊಳ್ಳುತ್ತಾ ಖುಷಿಪಡುವುದನ್ನು ನೋಡಿರುತ್ತೀರಿ. ಆದರೆ, ಈ ದಂಪತಿ ಮಾತ್ರ ಡೈವೋರ್ಸ್ ವೇಳೆಯೂ ಸೆಲ್ಫಿಯ ಜೋಷ್‍ನಲ್ಲಿ ಮುಳುಗಿ ಸುದ್ದಿಯಾಗಿಬಿಟ್ಟಿದ್ದಾರೆ.

ವಿಚ್ಛೇದನಕ್ಕೆಂದು ಕೋರ್ಟ್‍ಗೆ ಹೋಗುವ ದಂಪತಿಯ ಮುಖಗಳು ಗಂಟಿಕ್ಕಿರುತ್ತವೆಯೇ ಹೊರತು, ನಗೆಯ ಸೊಲ್ಲಂತೂ ಕಾಣಲು ಸಾಧ್ಯವೇ ಇಲ್ಲ. ಡೈವೋರ್ಸ್ ಸಿಕ್ಕಿತು, ಇನ್ನು ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ ಎಂದು ಹೇಳುವವರೇ ಹೆಚ್ಚು. ಇವರೆಲ್ಲರಿಗೂ ಹೊಟ್ಟೆ ಉರಿಸುವಂತೆ ಕೆನಡಾದ ಈ ದಂಪತಿ ನಡೆದುಕೊಂಡಿದ್ದಾರೆ.

ವಿಚ್ಛೇದನಕ್ಕೆ ಅರ್ಜಿ ಹಾಕಿ ಕೋರ್ಟ್‍ನಿಂದ ಹೊರಬರುತ್ತಲೇ ಕ್ರಿಸ್ ಮತ್ತು ಶ್ಯಾನನ್ ನ್ಯೂಮನ್ ನವದಂಪತಿಯಂತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ಇದನ್ನು ತಮ್ಮ ತಮ್ಮ ಫೇಸ್‍ಬುಕ್‍ಗೂ ಅಪ್‍ಲೋಡ್ ಮಾಡಿದ್ದಾರೆ. ಈಗ ಈ ಫೋಟೋ ಡೈವೋರ್ಸ್ ಸೆಲ್ಫಿ, ಟೀಮ್ ನ್ಯೂಮನ್ ಎಂಬೆಲ್ಲ ಹ್ಯಾಷ್‍ಟ್ಯಾಗ್‍ಗಳಲ್ಲಿ ಟ್ವಿಟರ್ ನಲ್ಲಿ ಹರಿದಾಡಲಾರಂಭಿಸಿದೆ.

ಫೇಸ್‍ಬುಕ್‍ನಲ್ಲಿ ಇದು 35 ಸಾವಿರ ಬಾರಿ ಶೇರ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕ್ರಿಸ್, ``ನಾವು ಡೈವೋರ್ಸ್ ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ ಸೆಲ್ಫಿಯಲ್ಲಿ ನಗುತ್ತಿಲ್ಲ. ಬದಲಿಗೆ ನಾವೇನೋ ಅಸಾಮಾನ್ಯವಾದದ್ದನ್ನು ಸಾಧಿಸಿದ್ದೇವೆ ಎಂದನಿಸುತ್ತಿದೆ'' ಎಂದಿದ್ದಾರೆ. ``ನಾವು ಬಹಳ ಗೌರವಪೂರ್ವಕವಾಗಿ, ಸರಿಯಾಗಿ ಚಿಂತಿಸಿ ನಮ್ಮ ವಿವಾಹಕ್ಕೆ ಕೊನೆಹಾಡಿದ್ದೇವೆ.

ಅಲ್ಲದೆ, ನಮ್ಮ ಇಬ್ಬರು ಮಕ್ಕಳಿಗೂ ಹೆತ್ತವರಾಗಿ ಮುಂದುವರಿಯುತ್ತೇವೆ. ಕ್ರಿಸ್‍ಮಸ್ ಪಾರ್ಟಿ ವೇಳೆ ಯಾರ ಬಳಿ ಹೋಗಬೇಕು ಎಂಬ ಪ್ರಶ್ನೆ ಅವರಲ್ಲಿ ಮೂಡಲ್ಲ. ಏಕೆಂದರೆ ನಾವಿಬ್ಬರೂ ಒಂದೇ ಬದಿ ಕುಳಿತಿರುತ್ತೇವೆ, ಅವರ ಮದುವೆ ಸಮಯದಲ್ಲೂ ನಮಗಾಗಿ ಆಚೀಚೆ ಹುಡುಕಬೇಕಾಗಿಲ್ಲ, ಏಕೆಂದರೆ ಆಗಲೂ ನಾವು ಅಕ್ಕಪಕ್ಕವೇ ಕುಳಿತಿರುತ್ತೇವೆ'' ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!