ಕಠ್ಮಂಡು: ವಿಶ್ವದ ಅತಿ ಕುಬ್ಜ ವ್ಯಕ್ತಿ ಎಂದೇ ಖ್ಯಾತರಾಗಿದ್ದ ನೇಪಾಳದ ಬಹದ್ದೂರ್ ಚಂದ್ರ ಡಾಂಗಿ(75) ಶುಕ್ರವಾರ ಮೃತಪಟ್ಟಿದ್ದಾರೆ.
ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ಅಮೆರಿಕದ ಸಮೋವಾದ ಪಾಗೋ ಪಾಗೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಬರೀ 21.5 ಇಂಚು ಎತ್ತರವಿದ್ದ ಡಾಂಗಿ ಅವರು 2012ರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಮಾಡಿದ್ದು, ವಿಶ್ವದ ಕುಳ್ಳ ಎಂದು ಪ್ರಸಿದ್ಧರಾಗಿದ್ದರು. ``ಇಂದು, ಜಗತ್ತಿನ ಅತಿ ಕುಬ್ಜ ವ್ಯಕ್ತಿಯನ್ನು ಕಳೆದುಕೊಂಡ ಕಾರಣ ನಮ್ಮ ಸರ್ಕಸ್ ಬಳಗದಲ್ಲಿ ಕಣ್ಣೀರ ಕೋಡಿಯೇ ಹರಿಯಿತು.
ಅವರನ್ನು ನಾವು ಪ್ರೀತಿಯಿಂದ ಪ್ರಿನ್ಸ್ ಚಂದ್ರ ಎಂದು ಕರೆಯುತ್ತಿದ್ದೆವು'' ಎಂದು ಪುಣೆಯ ರ್ಯಾಂಬೋ ಸರ್ಕಸ್‍ನ ಮಾಲೀಕ ಸುಜಿತ್ ದಿಲೀಪ್ ಹೇಳಿದ್ದಾರೆ.