ವಿದೇಶ

ಭೌತವಿಜ್ಞಾನಿ ಅಲ್ಬರ್ಟ್ ಐನ್‍ಸ್ಟೀನ್‍ರನ್ನು ಮೀರಿಸಿದ ಭಾರತೀಯ ಮೂಲದ ಬಾಲಕಿ

Mainashree

ಲಂಡನ್: ಹನ್ನೆರಡು ವರ್ಷದ ಭಾರತೀಯ ಮೂಲದ ಬಾಲಕಿ ಲಿಡಿಯಾ ಸೆಬಾಸ್ಟಿಯನ್ ಬುದ್ಧಿ ಮತ್ತೆಯಲ್ಲಿ ಭೌತವಿಜ್ಞಾನಿಗಳಾದ ಅಲ್ಬರ್ಟ್ ಐನ್ ಸ್ಟೀನ್ ಹಾಗೂ ಸ್ಟೀಫನ್ ಹಾಕಿಂಗ್‍ರನ್ನು ಹಿಂದಿಕ್ಕಿದ್ದಾಳೆ.

ಮೆನ್ಸಾ ಐಕ್ಯೂ ಟೆಸ್ಟ್‍ನಲ್ಲಿ 162 ಅಂಕ ಪಡೆದಿದ್ದಾಳೆ ಎಂದು ಹೇಳಲಾಗಿದೆ. ಹಾಕಿಂಗ್ ಹಾಗೂ ಐನ್‍ಸ್ಟೀನ್ ಬುದ್ಧಿಮತ್ತೆ 160 ಆಗಿತ್ತು ಎಂದು ಮೆನ್ಸಾ ಹೇಳಿದೆ. ಉನ್ನತ ಬುದ್ಧಿಮತ್ತೆ ಹೊಂದಿರುವವರನ್ನು ಗುರುತಿಸುವ ಮೆನ್ಸಾ ಎನ್ನುವ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಈಕೆ ಅತ್ಯುನ್ನತ ಅಂಕಗಳಿಸಿದ್ದಾಳೆ.

ಮೊದಲು ನನಗೆ ತೀವ್ರ ಅಂಜಿಕೆ ಇತ್ತು. ಆದರೆ, ಒಮ್ಮೆ ಪರೀಕ್ಷೆ ಎದುರಿಸುತ್ತಿದ್ದಂತೆ ನಾನು ಅಂದುಕೊಂಡದ್ದಕ್ಕಿಂತ ತುಂಬಾ ಸುಲಭವಿದೆ ಎಂದು ಅನಿಸಿತು ಎಂದು ಲಿಡಿಯಾ ಹೇಳಿದ್ದಾಳೆ. ಹಾಕಿಂಗ್, ಐನ್‍ಸ್ಟೀನ್ ಐಕ್ಯೂ 160 ಆಗಿತ್ತು.

SCROLL FOR NEXT