ನವದೆಹಲಿ: ಟರ್ಕಿಯಲ್ಲಿ 2800 ವರ್ಷಗಳ ಇತಿಹಾಸ ಬಯಲಾಗಿದೆ. ಸಂಶೋಧಕರು ಉರಟು ಕಿಂಗ್‍ಡಮ್ ನ ಡ್ರಮ್ ಆಕಾರದ ಸಮಾಧಿಗಳು ಪತ್ತೆಯಾಗಿವೆ.
ವ್ಯಾನ್ಸ್ ಪ್ರದೇಶದಲ್ಲಿ 9ನೇ ಶತಮಾನದ ಈ ಸಮಾಧಿಗಳು ಸಿಕ್ಕಿವೆ. ವ್ಯಾನ್ಸ್ ಪ್ರದೇಶ ಉರಟು ರಾಜರ ಆಳ್ವಿಕೆಗೆ ಒಳಪಟ್ಟಿದ್ದಾಗಿದ್ದು, 9ನೇ ಶತಮಾನದ ಮಧ್ಯಂತರದ ವರೆಗೆ ಅವರೇ ಆಡಳಿತ ನಡೆಸಿದ್ದಾರೆ. ಆದರೆ ಈ ಮಧ್ಯಭಾಗದಲ್ಲಿ ಮೇಡಸ್ ರಾಜರಿಂದ ಸಾಮ್ರಾಜ್ಯವನ್ನು ಸೋತ ಬಳಿಕ ರಾಜ್ಯ ನಾಶವಾಗಿದೆ. 50 ಇತಿಹಾಸಕಾರರು ಈ ಪ್ರದೇಶದಲ್ಲಿ ಉತ್ಖನನ ನಡೆಸಿದ್ದು, ಈ ಸಂದರ್ಭದಲ್ಲಿ ಈ ಸಮಾಧಿಗಳು ಪತ್ತೆಯಾಗಿವೆ. ಇವುಗಳಲ್ಲಿ ಶವಗಳ ಜತೆಗೆ ಅಪಾರ ಪ್ರಮಾಣದ ಸಂಪತ್ತನ್ನು ಇಟ್ಟಿರಬಹುದು ಎಂದು ಶಂಕಿಸಿದ್ದಾರೆ.