ಲಂಡನ್: ಚಾನೆಲ್ 4. ಬ್ರಿಟನ್ನಿನ ಈ ನ್ಯೂಸ್ ಚಾನೆಲ್ಲನ್ನು ಎಷ್ಟು ಜನ ಕೇಳಿದ್ದಾರೋ ಗೊತ್ತಿಲ್ಲ. ಆದರೆ, ಅದಕ್ಕಿಂತ ದುಪ್ಪಟ್ಟು ಪರಿಚಿತಗೊಂಡಿರುವ ಮನುಷ್ಯ ಆ ನ್ಯೂಸ್ ಚಾನೆಲ್ಲಿನ ಲಿಯಾಮ್ ಡಟನ್.
ಈತ ಆ ಚಾನೆಲ್ಲಿನಲ್ಲಿ ವೆದರ್ ಆ್ಯಂಕರ್. ಎಲ್ಲೆಲ್ಲಿ ಎಷ್ಟೆಷ್ಟು ತಾಪಮಾನ ಇದೆ, ಇವತ್ತು ಎಲ್ಲಿ ಮಳೆ ಬರುತ್ತೆ ಅಂತ ದೊಡ್ಡ ಡಿಜಿಟಲ್ ಮಾ್ಯಪಿನೆದುರು ನಿಂತು ಹೇಳುತ್ತಾನೆ. ಲಿಯಾಮ್ ಈ ಕೆಲಸ ಮಾಡುತ್ತ ನಾಲ್ಕೈದು ವರುಷವಾಯಿತು. ಬ್ರಿಟನ್ ಹೊರತಾಗಿ ಈತ ಅಷ್ಟೊಂದು ಪರಿಚಿತಗೊಂಡಿರಲಿಲ್ಲ. ಆದರೆ, ಮೊನ್ನೆ ಸೆ.9ರಂದು ಈತನ ಹೆಸರು ವಿಶ್ವವ್ಯಾಪಿ ಆಯಿತು. ಈತನ ಸ್ಪಷ್ಟ ಉಚ್ಛಾರಣೆಗೆ ಎಲ್ಲೆಡೆಯಿಂದ ಪ್ರಶಂಸೆ ಸುರಿದು ಬಂತು. ಅಂದಹಾಗೆ, ಈತನನ್ನು ಜಗವ್ಯಾಪಿ ಮಾಡಿಸಿದ್ದು ನಾರ್ತ್‍ವೆಸ್ಟ್ ವೇಲ್ಸ್ ನ ಒಂದು ಹಳ್ಳಿ. ಈ ಹಳ್ಳಿಯ ಹೆಸರೇನು ಗೊತ್ತಾ?
Llanfairpwllgwyngyllgogerychwyrndrobwllllantysiliogogogoch.. ಉಚ್ಚರಿಸಲು ಯಾರಿಗೂ ಕಷ್ಟವಾಗುವ ಹಳ್ಳಿಯ ಹೆಸರನ್ನು ಲಿಯಾಮ್ ಸುಲಲಿತವಾಗಿ ಉಲಿದ. ಆ ದಿನ ಬ್ರಿಟನ್ನಿನಲ್ಲೇ ಅತಿಹೆಚ್ಚು ಉಷ್ಣಾಂಶ ದಾಖಲುಗೊಂಡ ಹಳ್ಳಿಯಾಗಿತ್ತು ಇದು. ಈ ವಿಡಿಯೋ ಈಗ ವೈರಲ್ ಆಗಿದೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ