ಕ್ಯಾನ್‍ಬೆರಾ: ಮಹತ್ವದ ಬೆಳವಣಿಗೆಯಲ್ಲಿ ಆಸ್ಟ್ರೇಲಿಯಾ ಪ್ರಧಾನಿಯಾಗಿದ್ದ ಟೋನಿ ಅಬೋಟ್ ರನ್ನು ಪದಚ್ಯುತಿಗೊಳಿಸಲಾಗಿದೆ. ಮಾಲ್ಕಾಂ ಟನ್ರ್ ಬುಲ್‍ರನ್ನು ಅಬೋಟ್ ಸ್ಥಾನಕ್ಕೇರಿಸಲಾಗಿದೆ.
ಕನ್ಸರ್ವೇಟಿವ್ ಪಕ್ಷದಲ್ಲಿನ ಭಿನ್ನಮತ ಮತ್ತು ಅವರು ಜಾರಿಗೊಳಿಸಿದ ಆರೋಗ್ಯ ಯೋಜನೆಯಿಂದ ಸರ್ಕಾರದ ಜನಪ್ರಿಯತೆ ಕುಂದಿತ್ತು. ಹೀಗಾಗಿ, ಕನ್ಸರ್ವೇಟಿವ್ ಪಕ್ಷ ಅವಸರದಲ್ಲಿ ಆಯೋಜಿಸಿದ್ದ ಅಭಿಪ್ರಾಯ ಸಂಗ್ರಹಣೆಯಲ್ಲಿ ಅಬೋಟ್‍ಗೆ 44 ಮತಗಳು ಪ್ರಾಪ್ತಿಯಾದರೆ, ಟರ್ನ್‍ಬುಲ್‍ಗೆ 54 ಮತಗಳು ಸಿಕ್ಕಿವೆ.
ಮುಂದಿನ ವಾರ ಬುಲ್ ಪ್ರಮಾಣ ಸ್ವೀಕರಿಸಲಿದ್ದಾರೆ. ಅಬೋಟ್ ಭಾರತಕ್ಕೆ ಯುರೇನಿಯಂ ಪೂರೈಕೆ ಪ್ರಸ್ತಾಪಕ್ಕೆ ಮೋದಿ ಜತೆ ಸಹಿ ಹಾಕಿದ್ದರು.