ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷರಾಗಲು ಮುಸ್ಲಿಮರು ಯೋಗ್ಯರಲ್ಲ ಎಂದು ಅಮೆರಿಕಾ ಅಧ್ಯಕ್ಷೀಯ ಅಭ್ಯರ್ಥಿ ಬೆನ್ ಕಾರ್ಸನ್ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಮುಸ್ಲಿಮರ ನಂಬಿಕೆಗಳು ಅಮೆರಿಕಾದ ತತ್ವದಾರ್ಶಗಳಿಗೆ ವಿರುದ್ಧವಾಗಿದ್ದು, ಒಂದು ವೇಳೆ ಮುಸ್ಲಿಮನೊಬ್ಬ ಅಮೆರಿಕಾದ ಅಧ್ಯಕ್ಷನಾದರೇ ಆತನನ್ನು ಅಮೆರಿಕಾ ಜನತೆ ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಬೆನ್ ಕಾರ್ಸನ್ ಹೇಳಿಕೆಗೆ ಅಮೆರಿಕಾದ ಮುಸ್ಲಿಮರ ನಾಗರಿಕ ಹಕ್ಕುಗಳ ಸಮುದಾಯ ತೀವ್ರ ಆಕ್ರೋಶ ವ್ಯಕ್ತ ಪಡಿಸಿದೆ. ಬೆನ್ ಕಾರ್ಸನ್ ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಿಂದ ಅವರನ್ನು ಅನರ್ಹ ಗೊಳಿಸಬೇಕು ಎಂದು ಒತ್ತಾಯಿಸಿದೆ.