ವಿದೇಶ

ಸೂಪರ್ಮ್ಯಾನ್ ಸ್ಟಂಟ್ ಮಾಡಿದ್ದಕ್ಕೆ ಮಲೇಶಿಯಾದಲ್ಲಿ ನಾಲ್ವರಿಗೆ ಸೆರೆವಾಸ

Guruprasad Narayana

ಕೌಲಾಲಾಂಪುರ್: ದ್ವಿಚಕ್ರ ವಾಹನ ಓಡಿಸುವಾಗ ಸೂಪರ್ಮ್ಯಾನ್ ಸ್ಟಂಟ್ ಗಳನ್ನು ಮಾಡಿದ್ದಕ್ಕೆ ತಪ್ಪಿತಸ್ಥರೆಂದು ಪರಿಗಣಿಸಿರುವ ಮಲೇಶಿಯಾ ನ್ಯಾಯಾಲಯ ಅವರಿಗೆ ೨ ದಿನಗಳ ಸೆರೆವಾಸದ ಜೊತೆಗೆ ೧೧೭೧ ಡಾಲರ್ ಗಳ ದಂಡ ವಿಧಿಸಿ ತೀರ್ಪು ನೀಡಿದೆ.

ಅಪಾಯಕಾರಿ ರೀತಿಯಲ್ಲಿ ದ್ವಿಚಕ್ರ ವಾಹನ ಓಡಿಸಿ, ಸೂಪರ್ಮ್ಯಾನ್ ಸ್ಟಂಟ್ ಗಳನ್ನು ಮಾಡಿದ್ದರು ಎಂದು ಈ ನಾಲ್ವರ ವಿರುದ್ಧ ಆಪಾದಿಸಲಾಗಿತ್ತು. ಎದೆಯ ಮೇಲೆ ಮಲಗಿಕೊಂಡು ಕಾಲುಗಳನ್ನು ಹಿಂದಕ್ಕೆ ಚಾಚಿ ಬೈಕು ಓಡಿಸುವ ಸ್ಟಂಟ್ ಇವರು ಪ್ರದರ್ಶಿಸಿದ್ದರು ಎಂದು ಆಪಾದಿಸಲಾಗಿತ್ತು.

ಸೆಪ್ಟಂರ್ ೧೯ ಮತ್ತು ೨೦ ರಂದು ಕ್ವಾಲಾಲಾಂಪುರದ ಡ್ಯೂಕ್ ಎಕ್ಸ್ಪ್ರೆಸ್ಸ್ ವೇ ನಲ್ಲಿ ಈ ಅಪರಾಧ ಎಸಗಲಾಗಿತ್ತು.

SCROLL FOR NEXT