ಹಜ್ ಯಾತ್ರೆ ಇಂದಿನಿಂದ ಶುರು
ಮುಸ್ಲಿಮರ ಹಜ್ ಯಾತ್ರೆ ಮಂಗಳವಾರದಿಂದ ಆರಂಭವಾಗಲಿದೆ...
ಮೆಕ್ಕಾ: ಮುಸ್ಲಿಮರ ಹಜ್ ಯಾತ್ರೆ ಮಂಗಳವಾರದಿಂದ ಆರಂಭವಾಗಲಿದೆ.
ವಿಶ್ವಾದ್ಯಂತದ 30 ಲಕ್ಷ ಯಾತ್ರಿಗಳು ಮೀನಾದ ಕಅಬಾದಲ್ಲಿ ಸೇರಲಿದ್ದು, 5 ದಿನಗಳ ಕಾಲ ಯಾತ್ರೆ ಮುಂದುವರಿಯಲಿದೆ. ಮುಂದಿನ ಶನಿವಾರ ಸೈತಾನನಿಗೆ ಕಲ್ಲು ಬಿಸಾಕುವ ಪ್ರಕ್ರಿಯೆ ಮೂಲಕ ಹಜ್ ಯಾತ್ರೆಗೆ ತೆರೆ ಬೀಳಲಿದೆ. ವಿಶ್ವದ ಅತಿದೊಡ್ಡ ಯಾತ್ರೆಗಳಲ್ಲಿ ಒಂದಾದ ಹಜ್ಗೆ ಈ ಬಾರಿ ಐಎಸ್ ಐಎಸ್ ಉಗ್ರರ ಬೆದರಿಕೆ ಇದ್ದು, ಈ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾ ಸರ್ಕಾರ ಮೆಕ್ಕಾದಲ್ಲಿ ಭಾರಿ ಬಂದೋಬಸ್ತ್ ಕೈಗೊಂಡಿದೆ.
ಮಸೀದಿಯ ಸುತ್ತಲೂ 5 ಸಾವಿರ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದಿನದ 24 ಗಂಟೆಯೂ ಹದ್ದಿನ ಕಣ್ಣಿಟ್ಟು ಕಾಯಲಾಗುತ್ತಿದೆ. ಈ ಬಾರಿ 1.5 ಲಕ್ಷ ಭಾರತೀಯರು ಯಾತ್ರೆ ಕೈಗೊಳ್ಳಲಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.