ಸನಾ: ಬಕ್ರೀದ್ ಸಂಭ್ರಮಾಚರಣೆ ವೇಳೆ ಯೆಮೆನ್ ಮಸೀದಿಯೊಂದರಲ್ಲಿ ಮುಸ್ಲಿಂರು ಪ್ರಾರ್ಥನೆ ವೇಳೆ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದು, ಪರಿಣಾಮ 29 ಜನರು ಸಾವನ್ನಪ್ಪಿದ್ದಾರೆ.
ಸನಾದ ಪೊಲೀಸ್ ಅಕಾಡೆಮಿ ಸಮೀಪವಿರುವ ಬಲಿಲಿ ಮಸೀದಿಯಲ್ಲಿ ಬಾಂಬ್ ಸ್ಫೋಟಗೊಂಡು 29 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ಹಲವರಿಗೆ ಗಂಭೀರ ಗಾಯಗಳಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಯೆಮೆನ್ ಪೋಸ್ಟ್ ಪತ್ರಿಕೆ ಟ್ವೀಟ್ ಮಾಡಿದೆ.
ಈ ಪ್ರದೇಶ ಹೂತಿ ಶಿಯಾ ಬಂಡುಕೋರರ ವಶದಲ್ಲಿದ್ದು, ಇರಾನ್ ಬೆಂಬಲಿತ ಹೂತಿ ಬಂಡುಕೋರರು ರಾಜಧಾನಿ ಸನಾ ಸೇರಿದಂತೆ ಯೆಮೆನ್‌ನ ಹಲವು ಪ್ರದೇಶಗಳ ಮೇಲೆ ಹಿಡಿತ ಹೊಂದಿದ್ದಾರೆ.