ಹೈದರಾಬಾದ್: ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದ ಮಸೀದಿ ಬಳಿ ಹಜ್ ಯಾತ್ರೆ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಭಾರತೀಯ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಮೃತಪಟ್ಟ ಮಹಿಳೆ ತೆಲಂಗಾಣದ ಮೂಲದವರಾಗಿದ್ದು, ಈ ಘಟನೆಯನ್ನು ತೆಲಂಗಾಣ ರಾಜ್ಯ ಹಜ್ ಸಮಿತಿ ಐಎಎನ್ಎಸ್ ಗೆ ಸ್ಪಷ್ಟಪಡಿಸಿದ್ದಾರೆ. ಮೃತರನ್ನು ಬಿಬಿಜಾನ್ ಎಂದು ಗುರುತಿಸಲಾಗಿದ್ದು ಹೈದರಾಬಾದ್ ಬಳಿಯ ರಂಗಾರೆಡ್ಡಿ ಜಿಲ್ಲೆಯ ನಿವಾಸಿ ಎಂದು ಗುರುತಿಸಲಾಗಿದೆ.
ಘಟನೆ ಸಂಬಂಧ ವಿದೇಶಾಂಗ ಸಚಿವಾಲಯ ಹೆಲ್ಪಲೈನ್ ನಂಬರ್- 009661254580000 ಬಿಡುಗಡೆ ಮಾಡಿದೆ. ಭಾರತೀಯರು ಮೃತಪಟ್ಟಿರುವ ಬಗ್ಗೆ ಮಾಹಿತಿ ಇಲ್ಲ ಎಂದು ವಿದೇಶಾಂಗ ಇಲಾಖೆ ಸ್ಪಷ್ಟಪಡಿಸಿದ ಬೆನ್ನಲ್ಲೇ ತೆಲಂಗಾಣ ಹಜ್ ಸಮಿತಿ ಓರ್ವ ಮಹಿಳೆ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಿದೆ.