ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಭಾರತೀಯ ಮೂಲದ ಮೂವರು ಅಮೆರಿಕನ್ನರನ್ನು ನಂಬಿಕೆ ಆಧಾರಿತ ಮತ್ತು ನೆರೆಹೊರೆಯ ಪಾಲುದಾರಿಕೆ ಕುರಿತ ಸಲಹಾ ಮಂಡಳಿ ಆಯ್ಕೆ ಮಾಡಿದ್ದಾರೆ.
ಶ್ವೇತಭವನ ಪ್ರಕಟಣೆಯ ಪ್ರಕಾರ, ಈ ಸಮಿತಿ ಬಡತನ ಮತ್ತು ಅಸಮಾನತೆ ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸರ್ಕಾರಕ್ಕೆ ಸಲಹೆ ನೀಡಲಿದೆ.
ಭಾರತೀಯ ಮೂಲದ ಪ್ರೀತಾ ಬನ್ಸಾಲ್, ನಿಪುಣ್ ಮೆಹ್ತಾ ಹಾಗೂ ಜಸ್ಜಿತ್ ಸಿಂಗ್ ಸೇರಿದಂತೆ ಒಟ್ಟು 14 ಮಂದಿಯನ್ನು ಈ ಸಮಿತಿಗೆ ಒಬಾಮ ಆಯ್ಕೆ ಮಾಡಿದ್ದಾರೆ. 'ಈ ಎಲ್ಲಾ ವ್ಯಕ್ತಿಗಳು ಅಮೆರಿಕ ಜನತೆಗೆ ಉತ್ತಮ ಸೇವೆ ನೀಡುವ ವಿಶ್ವಾಸವಿದೆ ಮತ್ತು ಅವರೊಂದಿಗೆ ಕೆಲಸ ಮಾಡಲು ನಾನು ಉತ್ಸುಕನಾಗಿರುವುದಾಗಿ' ಅಮೆರಿಕದ ಅಧ್ಯಕ್ಷರು ಹೇಳಿದ್ದಾರೆ.
ಬನ್ಸಾಲ್ ಅವರು ಮ್ಯಾಸಚೂಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ)ಯಲ್ಲಿ ಉಪಾನ್ಯಾಶಕಿಯಾಗಿದ್ದಾರೆ. ನಿಪುಣ್ ಮೆಹ್ತಾ ಅವರು ಸರ್ವಿಸ್‌ಸ್ಪೇಸ್‌ನ ಸಂಸ್ಥಾಪಕರಾಗಿದ್ದಾರೆ.