ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದರ ನಡುವೆಯೇ ರಾಹುಲ್ ಅವರ ಫೋಟೋ ಟ್ವಿಟರ್ನಲ್ಲಿ ಪ್ರತ್ಯಕ್ಷವಾಗಿದೆ.
ಕಾಂಗ್ರೆಸ್ ಹೇಳಿಕೊಂಡಂತೆಯೇ ರಾಹುಲ್ ಅವರು ಅಮೆರಿಕದ ಆ್ಯಸ್ಪೆನ್ನಲ್ಲಿ ನಡೆದ¸ ಸಮಾವೇಶದಲ್ಲಿ ಭಾಗಿಯಾಗಿದ್ದ ಫೋಟೋಗಳನ್ನು ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಕಾಂಗ್ರೆಸ್ ನಾಯಕ ಮಿಲಿಂದ್ ದೇವೊರಾ ಅವರು ಈ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ.
ಅದರಲ್ಲಿ ರಾಹುಲ್ ಅವರು ಐಸ್ ಲ್ಯಾಂಡ್ ಅಧ್ಯಕ್ಷ ಒಲಾಫರ್ ಗ್ರಿಮ್ಸನ್ ಹಾಗೂ ಬ್ರಿಟನ್ನ ರಾಜಕಾರಣಿ ಡೇವಿಡ್ ಮಿಲಿಬ್ಯಾಂಡ್ ಜತೆಗೆ ತೆಗೆದುಕೊಂಡ ಫೋಟೋ ಕೂಡ ಸೇರಿದೆ.
ರಾಹುಲ್ ಅವರು `ವೀಕೆಂಡ್ ವಿದ್ ಚಾರ್ಲಿ ರೋಸ್'ನಲ್ಲಿ ಪಾಲ್ಗೊಳ್ಳಲು ಆ್ಯಸ್ಪನ್ಗೆ ತೆರಳಿದ್ದಾರೆ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ, ಇದನ್ನು ಅಲ್ಲಗಳೆದಿದ್ದ ಬಿಜೆಪಿ, ಈ ಕಾರ್ಯಕ್ರಮ ಜೂನ್-ಜುಲೈನಲ್ಲೇ ಮುಗಿದಿದ್ದು, ಕಾಂಗ್ರೆಸ್ ಸುಳ್ಳು ಹೇಳುತ್ತಿದೆ ಎಂದು ಹೇಳಿತ್ತು.