ಇಸ್ಲಾಮಾಬಾದ್: ಪಾಕಿಸ್ತಾನ ಪರಮಾಣು ಯೋಜನೆ ಅಭಿವೃದ್ಧಿಪಡಿಸಿಕೊಳ್ಳುವುದನ್ನು ಪ್ರಶ್ನಿಸಲು ಭಾರತಕ್ಕೆ ಹಕ್ಕಿಲ್ಲ ಎಂದು ಪಾಕಿಸ್ತಾನ ಪತ್ರಿಕೆ ಹೇಳಿದೆ.
ಅಮೆರಿಕದಲ್ಲಿ ನಡೆದ ಪರಮಾಣು ಭದ್ರತಾ ಶೃಂಗಸಭೆಯ ಬಗ್ಗೆ ಸಂಪಾದಕೀಯ ಬರೆದಿರುವ ಪಾಕಿಸ್ತಾನ ಪತ್ರಿಕೆ ದಿ ನೇಷನ್, ಭಾರತದ ಅಣು ಯೋಜನೆ ಮಹಾತ್ವಾಕಾಂಕ್ಷಿಯಾಗಿದ್ದು, ಪಾಕಿಸ್ತಾನದ ಅಣು ಯೋಜನೆಗಳನ್ನು ಪ್ರಶ್ನಿಸುವಂತಿಲ್ಲ ಎಂದಿದೆ.
ಇನ್ನು ಭಾರತದ ಅಣು ಯೋಜನೆಗಳಿಗೆ ಬಂಬಲ ನೀಡಿರುವ ಅಮೆರಿಕಾದ ಕ್ರಮವನ್ನು ವಿರೋಧಿಸಿರುವ ಪತ್ರಿಕೆಯ ಸಂಪಾದಕೀಯ, ಅಮೆರಿಕದಿಂದ ಭಾರತ ಅತಿ ಹೆಚ್ಚಿನ ಮಟ್ಟದಲ್ಲಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುತ್ತಿದೆ. ಅದ್ದರಿಂದ ಅಮೆರಿಕ ಭಾರತದ ಅಣು ಯೋಜನೆಗಳಿಗೆ ಬಂಬಲ ನೀಡುತ್ತಿದೆ ಎಂದು ಆರೋಪಿಸಿದೆ.
ಅಣು ಭದ್ರತಾ ಶೃಂಗಸಭೆಗೂ ಮುನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅಮೆರಿಕ ಕಾರ್ಯದರ್ಶಿ ಜಾನ್ ಕೆರ್ರಿ ಅವರೊಂದಿಗೆ ನಡೆಸಿದ ಮಾತುಕತೆ ವೇಳೆ ಪಾಕಿಸ್ತಾನದ ಅಣು ಯೋಜನೆಗಳ ಕುರಿತು ಚರ್ಚೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪಾಕ್ ಪತ್ರಿಕೆ ಸಂಪಾದಕೀಯ ಬರೆದಿದ್ದು ಪಾಕಿಸ್ತಾನದ ಅಣು ಯೋಜನೆಗಳನ್ನು ಭಾರತ ಪ್ರಶ್ನಿಸುವಂತಿಲ್ಲ ಎಂದಿದೆ.