ವಾಷಿಂಗ್ಟನ್ ನಲ್ಲಿ ನಡೆದ ಪರಮಾಣು ಭದ್ರತೆ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ 
ವಿದೇಶ

ಪರಮಾಣು ಶೃಂಗಸಭೆ: ಪ್ರಮುಖ ನಾಗರಿಕ ಭದ್ರತೆ ಕ್ರಮಗಳನ್ನು ಪ್ರಕಟಿಸಿದ ಮೋದಿ

ಪರಮಾಣು ಭದ್ರತೆ ಮತ್ತು ಪ್ರಸರಣ ನಿರೋಧ ಸೇರಿದಂತೆ ಪರಮಾಣು ಭಯೋತ್ಪಾದನೆ ಹಿಮ್ಮೆಟ್ಟಿಸಲು ಪರಮಾಣು ಕಳ್ಳಸಾಗಣೆ...

ವಾಷಿಂಗ್ಟನ್: ಪರಮಾಣು ಭದ್ರತೆ ಮತ್ತು ಪ್ರಸರಣ ನಿರೋಧ ಸೇರಿದಂತೆ ಪರಮಾಣು ಭಯೋತ್ಪಾದನೆ ಹಿಮ್ಮೆಟ್ಟಿಸಲು ಪರಮಾಣು ಕಳ್ಳಸಾಗಣೆ ಮತ್ತು ತಂತ್ರಜ್ಞಾನದ ನಿಯೋಜನೆ ಎದುರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೆಲವು ಪ್ರಮುಖ ಉಪಕ್ರಮಗಳನ್ನು ಘೋಷಿಸಿದ್ದಾರೆ.

ವಾಷಿಂಗ್ಟನ್ ನಲ್ಲಿ ನಿನ್ನೆ ಮುಕ್ತಾಯಗೊಂಡ ಎರಡನೇ ಪರಮಾಣು ಭದ್ರತೆ ಶೃಂಗಸಭೆಯಲ್ಲಿ ಅವರು ಈ ಘೋಷಣೆ ಮಾಡಿದರು. ಸುಮಾರು 50 ದೇಶಗಳ ನಾಯಕರು ಶೃಗಸಭೆಯಲ್ಲಿ ಭಾಗವಹಿಸಿದ್ದರು.

ಪರಮಾಣು ಭದ್ರತೆ ವಿಷಯದಲ್ಲಿ ತಮ್ಮ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಮೋದಿ, ಸಂಸ್ಥೆಯ ಚೌಕಟ್ಟು, ಸ್ವತಂತ್ರ ನಿಯಂತ್ರಣ ಸಂಸ್ಥೆ ಮತ್ತು ತರಬೇತಿ ಮತ್ತು ವಿಶೇಷ ಮಾನವಶಕ್ತಿಯ ಮೂಲಕ ಪರಮಾಣು ಭದ್ರತೆ ವಿಷಯದಲ್ಲಿ ಭಾರತ ದೇಶ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.

ಪರಮಾಣು ಭಯೋತ್ಪಾದನೆಯನ್ನು ನಾಶಪಡಿಸಲು ತಂತ್ರಜ್ಞಾನವನ್ನು ನಿಯೋಜಿಸಿ, ಅಭಿವೃದ್ಧಿಪಡಿಸುವುದು ಭಾರತದ ಯೋಜನೆಯಾಗಿದೆ. ಪರಮಾಣು ಕಳ್ಳಸಾಗಣೆಗೆ ತಡೆಯೊಡ್ಡಬೇಕಾಗಿದೆ ಎಂದು ಪ್ರಧಾನಿ ಆಶಿಸಿದರು. ಮುಂದಿನ ವರ್ಷ ಭಾರತ, ಜಾಗತಿಕ ಮಟ್ಟದಲ್ಲಿ ಪರಮಾಣು ಭಯೋತ್ಪಾದನೆ ತಡೆಗಟ್ಟುವ ಸಂಬಂಧ ಸಭೆಯನ್ನು ನಡೆಸಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್

ಲೀವರ್ ಕ್ಯಾನ್ಸರ್ ಗೆ 'ವೆಲ್ ಕಮ್' ಖ್ಯಾತಿಯ ಹಿರಿಯ ಬಾಲಿವುಡ್ ನಟ ಮುಷ್ತಾಕ್ ಖಾನ್ ಬಲಿ!