ಯುನೈಟೆಡ್ ಏರ್​ಲೈನ್ಸ್ 
ವಿದೇಶ

ವಿಮಾನದಿಂದ ಹೊರಹಾಕಿದ ಯುನೈಟೆಡ್ ಏರ್‌‌ಲೈನ್ಸ್‌ ಕ್ಷಮೆ ಯಾಚನೆಗೆ ಮುಸ್ಲಿಂ ಕುಟುಂಬ ಆಗ್ರಹ

ಕಳೆದ ತಿಂಗಳು ಚಿಕಾಗೊ ಒ ಹೇರ್ ಇಂಟರ್​ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಕಾರಣ ನೀಡಿ ವಿಮಾನದಿಂದ ಹೊರ ಹಾಕಿದ್ದಕ್ಕಾಗಿ ಯುನೈಟೆಡ್ ಏರ್​ಲೈನ್ಸ್...

ಚಿಕಾಗೊ: ಕಳೆದ ತಿಂಗಳು ಚಿಕಾಗೊ ಒ ಹೇರ್ ಇಂಟರ್​ನ್ಯಾಷನಲ್ ವಿಮಾನ ನಿಲ್ದಾಣದಲ್ಲಿ ಭದ್ರತಾ ಕಾರಣ ನೀಡಿ ವಿಮಾನದಿಂದ ಹೊರ ಹಾಕಿದ್ದಕ್ಕಾಗಿ ಯುನೈಟೆಡ್ ಏರ್​ಲೈನ್ಸ್ ಅಧಿಕೃತವಾಗಿ ಕ್ಷಮೆ ಯಾಚಿಸಬೇಕು ಎಂದು ಮುಸ್ಲಿಂ ಕುಟುಂಬವೊಂದು ಆಗ್ರಹಿಸಿದೆ.

ಮಾರ್ಚ್ 20 ರಂದು ಮಗುವಿಗೆ ಬೂಸ್ಟರ್ ಸೀಟು ಪಡೆಯುವುದು ಹೇಗೆ ಎಂಬುದಾಗಿ ವಿಮಾನದ ಸಹಾಯಕಿ ಜೊತೆಗೆ ಚರ್ಚಿಸಿದ ಬಳಿಕ ಯುನೈಟೆಡ್ ಏರ್​ಲೈನ್ಸ್ ಸಿಬ್ಬಂದಿ ವಿಮಾನಯಾನದ ಭದ್ರತೆ ಹಿನ್ನೆಲೆಯಲ್ಲಿ ನೀವು ವಿಮಾನದಿಂದ ಕೆಳಗಿಳಿಯಬೇಕಾಗುತ್ತದೆ ಎಂದು ಮುಸ್ಲಿಂ ಕುಟುಂಬಕ್ಕೆ ಸೂಚಿಸಿ ವಿಮಾನದಿಂದ ಹೊರಕ್ಕೆ ಕಳುಹಿಸಿದ್ದರು ಎಂದು ಮಗುವಿನ ತಾಯಿ ಎಮಾನ್- ಅಮಿ ಸಾದ್ ಶೆಬ್ಲೆ ಅವರು ಯೂಟ್ಯೂಬ್​ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ಆಪಾದಿಸಿದ್ದಾರೆ.

ಭದ್ರತೆಯ ಹೆಸರಿನಲ್ಲಿ ಮುಸ್ಲಿಮರಂತೆ ಕಾಣುವ ಪ್ರಯಾಣಿಕರನ್ನು ವಿಮಾನಗಳಿಂದ ಹೊರಹಾಕುವ ಘಟನೆಗಳು ನಮ್ಮ ಗಮನಕ್ಕೆ ಬರುತ್ತಿವೆ ಎಂದು ಅಮೆರಿಕನ್-ಇಸ್ಲಾಮಿಕ್ ರಿಲೇಷನ್ಸ್ (ಸಿಎಐಆರ್) ಕೌನ್ಸಿಲ್​ನ ಅಹ್ಮದ್ ರೆಹಾಬ್ ಹೇಳಿದ್ದಾರೆ. ಸಿಎಐಆರ್ ಮುಸ್ಲಿಂ ಕುಟುಂಬವನ್ನು ಪ್ರತಿನಿಧಿಸಿದೆ.

ಇದು ಕೇವಲ ಬೂಸ್ಟರ್ ಸೀಟಿಗೆ ಸಂಬಂಧಪಟ್ಟ ವಿಷಯ. ಕುಟುಂಬ ಮೊದಲು ಸ್ಕೈವೆಸ್ಟ್ 5811 ವಿಮಾನದಲ್ಲಿ ಚಿಕಾಗೋ ಒ ಹೇರ್​ನಿಂದ ವಾಷಿಂಗ್ಟನ್ ಡಿ.ಸಿ.ಗೆ ವಿಮಾನಯಾನ ಮಾಡಬೇಕಿತ್ತು. ಮಗುವಿನ ಸುರಕ್ಷತಾ ಸೀಟ್ ಕಾರಣಕ್ಕಾಗಿ ಬೇರೆ ವಿಮಾನಕ್ಕೆ ಬುಕ್ ಮಾಡಿದ್ದರು. ಈ ರೀತಿ ಪಯಣಕ್ಕೆ ಅವಕಾಶ ಮಾಡಿಕೊಡಲು ಫೆಡರಲ್ ಭದ್ರತಾ ನಿಯಮಗಳಲ್ಲಿ ಅವಕಾಶ ಇಲ್ಲ’ ಎಂದು ಯುನೈಟೆಡ್ ಏರ್​ಲೈನ್ಸ್ ಹೇಳಿಕೆಯೊಂದರಲ್ಲಿ ಪ್ರತಿಪಾದಿಸಿದೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT