ಕಾಬೂಲ್: ತಾಲಿಬಾನಿ ಉಗ್ರರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಆಫ್ಘಾನಿಸ್ತಾನ ಸೈನಿಕರು ಸುಮಾರು 40 ತಾಲಿಬಾಲಿ ಉಗ್ರರನ್ನು ಹತ್ಯೆ ಮಾಡಿದ್ದಾರೆ.
ಅಫ್ಘಾನಿಸ್ತಾನದ ಕುಂದೂಜ್ ಪ್ರಾಂತ್ಯದಲ್ಲಿ ಅಫ್ಘಾನ್ ಸೈನಿಕರು ನಡೆಸಿದ ಕಾರ್ಯಾಚರಣೆ ವೇಳೆ 40 ತಾಲಿಬಾನಿ ಉಗ್ರರು ಮೃತಪಟ್ಟಿದ್ದು, 8 ಉಗ್ರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನುಳಿದಂತೆ ಕಾರ್ಯಾಚರಣೆ ವೇಳೆ ನಾಲ್ವರು ಆಫ್ಘಾನಿಸ್ತಾನ್ ಸೈನಿಕರು ಮೃತಪಟ್ಟಿದ್ದು, 6 ಮಂದಿ ಗಾಯಗೊಂಡಿರುವುದಾಗಿ ಕುಂದೂಜ್ ನ ಪೊಲೀಸ್ ಮುಖ್ಯಾಧಿಕಾರಿ ಜನರಲ್ ಮೊಹಮ್ಮದ್ ಖಾಸಿಮ್ ಹೇಳಿದ್ದಾರೆ.
ಕುಂದೂಜ್ ನಗರದ ಉತ್ತರ ಭಾಗದಲ್ಲಿ ತಾಲಿಬಾನಿಗಳ ಉಪಟಳ ಹೆಚ್ಚಾಗಿದ್ದು, ತಾಲಿಬಾನ್ ಶಿಬಿರಗಳನ್ನು ಧ್ವಂಸಗೈದಿರುವ ಸೇನಾಪಡೆಗಳು ಉತ್ತರ ಭಾಗವನ್ನು ವಶಕ್ಕೆ ಪಡೆದುಕೊಂಡಿವೆ.