ವಿವಾದಾತ್ಮಕ ಹೇಳಿಕೆ ನೀಡಿದ ಫಿಲಿಪೀನ್ಸ್ ಅಧ್ಯಕ್ಷೀಯ ಅಭ್ಯರ್ಥಿ 
ವಿದೇಶ

ಗ್ಯಾಂಗ್ ರೇಪ್ ಸಂತ್ರಸ್ತೆ ಸುಂದರವಾಗಿದ್ದಳು: ಫಿಲಿಪೀನ್ಸ್ ಅಧ್ಯಕ್ಷೀಯ ಅಭ್ಯರ್ಥಿಯ ವಿವಾದಾತ್ಮಕ ಹೇಳಿಕೆ

ಫಿಲಿಪೀನ್ಸ್ ನ ಅಧ್ಯಕ್ಷೀಯ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಯಾಗಿರುವ ನಾಯಕ ಅತ್ಯಾಚಾರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮನಿಲಾ:ಫಿಲಿಪೀನ್ಸ್ ನ ಅಧ್ಯಕ್ಷೀಯ ಸ್ಥಾನಕ್ಕೆ ಸಂಭಾವ್ಯ ಅಭ್ಯರ್ಥಿಯಾಗಿರುವ ನಾಯಕ ಅತ್ಯಾಚಾರದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿರುವ ಮೇಯರ್ ರೋಡ್ರಿಗೋ ಡಿಗೋಂಗ್ ಡುಟೆರ್ಟೆ, ಆಸ್ಟ್ರೇಲಿಯಾ ಧರ್ಮ ಪ್ರಚಾರಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿ, ಗ್ಯಾಂಗ್ ರೇಪ್ ನಡೆದಿದ್ದರ ಬಗ್ಗೆ ಆಕ್ರೋಶವಿದೆ. ಆದರೆ ಗ್ಯಾಂಗ್ ರೇಪ್ ಗೆ ಒಳಗಾದ ಮಹಿಳೆ ಸುಂದರವಾಗಿದ್ದಳು, ಮೇಯರ್ ಮೊದಲು ರೇಪ್ ಮಾಡಬೇಕಿತ್ತು ಎಂದು ಹೇಳಿರುವುದು ವಿಡಿಯೋದಲ್ಲಿ ದಾಖಲಾಗಿದೆ.
ಏ.12 ರಂದು ನಡೆದ ಸಾರ್ವಜನಿಕ ಸಮಾವೇಶದಲ್ಲಿ ಮೇಯರ್ ರೋಡ್ರಿಗೋ ಈ ವಿವಾದಾತ್ಮಕ ಹೇಳಿಕೆ ನೀಡಿರುವುದು ಬಹಿರಂಗವಾಗಿದೆ. 1989 ರಲ್ಲಿ ಜೈಲಿನಿಂದ ತಪ್ಪಿಸಿಕೊಂಡಿದ್ದ ಖೈದಿಗಳು 36 ವರ್ಷದ ಆಸ್ಟ್ರೇಲಿಯಾ ಮೂಲದ ಧರ್ಮ ಪ್ರಚಾರಕಿಯನ್ನು ಅಪಹರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಿದ್ದರು.
ಫಿಲಿಪೀನ್ಸ್ ನಲ್ಲಿರುವ ಆಸ್ಟ್ರೇಲಿಯಾ ರಾಯಭಾರಿ ಕಚೇರಿ ಮೇಯರ್ ಹೇಳಿಕೆ ವಿರುದ್ಧ ಆಕ್ರೋಶಗೊಂಡಿದ್ದು, ಅತ್ಯಾಚಾರದ ಬಗ್ಗೆ ಹಗುರ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಎಚ್ಚರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮತ್ತೆ ಕಬ್ಬನ್‌ ಪಾರ್ಕ್‌ ಮೆಟ್ರೋ ನಿಲ್ದಾಣದಲ್ಲಿ ಕೆಟ್ಟುನಿಂತ ರೈಲು; ಕೆಲಕಾಲ ಸಂಚಾರದಲ್ಲಿ ವ್ಯತ್ಯಯ!

ಶಿವರಾಜ್ ಸಿಂಗ್ ಚೌಹಾಣ್ ಪುತ್ರನಿಗೆ ಕ್ಷಮೆಯಾಚಿಸಿದ ರಾಹುಲ್ ಗಾಂಧಿ: ಪ್ರಕರಣ ವಜಾಗೊಳಿಸಿದ ಹೈಕೋರ್ಟ್

'ಕನ್ನಡ ಬಂದಿದ್ರೆ ಇನ್ನೂ ಚೆನ್ನಾಗಿ ಮಾತನಾಡುತ್ತಿದ್ದೆ': ಕಾಂಗ್ರೆಸ್ ಸಿಎಂಗಳ ಎದುರೇ ಪ್ರಧಾನಿ ಮೋದಿ ಗುಣಗಾನ ಮಾಡಿದ ಆಂಧ್ರ ಸಿಎಂ Chandrababu Naidu!

Passport Fees Increases: ದೇಶದ ಜನತೆಗೆ ಕೇಂದ್ರದಿಂದ ಮತ್ತೊಂದು ಶಾಕ್! ಪಾಸ್ ಪೋರ್ಟ್ ಶುಲ್ಕ ಹೆಚ್ಚಳ, ಜು. 1 ರಿಂದ ಹೊಸ ದರಗಳು ಜಾರಿಗೆ

PWD ಸಚಿವ ಸತೀಶ್ ಜಾರಕಿಹೊಳಿ ಬಾಮೈದನ ಮನೆಯಲ್ಲಿ 13 ಕೋಟಿ ಮೌಲ್ಯದ ಆಸ್ತಿ ಪತ್ತೆ!