ಲಂಡನ್: ಐಎಸ್ಐಎಸ್ ಉಗ್ರರು ಮತ್ತೊಂದು ಪೈಶಾಚಿಕ ಕೃತ್ಯವೆಸಗಿದ್ದಾರೆ. ಉತ್ತರ ಇರಾಕ್ ನ ಎರಡನೇ ಅತಿ ದೊಡ್ಡ ನಗರ ಮಸೂಲ್ ನಲ್ಲಿ ಸೆಕ್ಸ್ ಗೆ ಅಡಿಯಾಳಾಗದ 250 ಬಾಲಕಿಯರನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ಉಗ್ರರು ತಾವು ಬಲವಂತವಾಗಿ ಮದುವೆಯಾಗಿದ್ದ ಬಾಲಕಿಯರನ್ನು ಹತ್ಯೆ ಮಾಡಿದ್ದಾರೆ ಎಂದು ಲಂಡನ್ ಮೂಲದ ಕುರ್ದಿಶ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ನೂ ಕೆಲವು ಬಾಲಕಿಯರನ್ನು ಅವರ ಕುಟುಂಬದವರೇ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.
ಸೆಕ್ಸ್ ಜಿಹಾದ್ ಅನ್ನು ಒಪ್ಪಿಕೊಳ್ಳಲು ನಿರಾಕರಿಸಿದ ಕನಿಷ್ಠ 250 ಬಾಲಕಿಯರನ್ನು ಹತ್ಯೆ ಮಾಡಲಾಗಿದ್ದು, ಈ ಪೈಕಿ ಐಎಸ್ಐಎಸ್ ಉಗ್ರರ ಮನವಿಯನ್ನು ಒಪ್ಪಿಕೊಳ್ಳದ ಕೆಲವು ಬಾಲಕಿಯರನ್ನು ಅವರ ಕುಟುಂಬದವರೇ ಹತ್ಯೆ ಮಾಡಿದ್ದಾರೆ ಎಂದು ಕುರ್ದಿಶ್ ಡೆಮೊಕ್ರಟಿಕ್ ಪಕ್ಷದ ವಕ್ತಾರ ಮಮುಜಿನ್ ಹೇಳಿರುವುದಾಗಿ ವರದಿ ಮಾಡಲಾಗಿದೆ.