ವಿದೇಶ

ಸರ್ಕಾರದ ವಿರುದ್ಧ 'ಮಾನವ ಹಕ್ಕುಗಳ ಕೇಸ್' ಗೆದ್ದ ನಾರ್ವೆಯ ಸಾಮೂಹಿಕ ಕೊಲೆಗಾರ

Guruprasad Narayana

ಆಸ್ಲೋ: ನಾರ್ವೆಯ ಸಾಮೂಹಿಕ ಹತ್ಯೆಯ ತಪ್ಪಿತಸ್ಥ ಖೈದಿ ಆಂಡ್ರೆಸ್ ಬೆಹ್ರಿಂಗ್ ಬ್ರೆಯ್ವಿಕ್, ಆ ದೇಶದ ವಿರುದ್ಧ 'ಮಾನವ ಹಕ್ಕುಗಳ ಪ್ರಕರಣದಲ್ಲಿ ಭಾಗಶಃ ಗೆಲುವು ಸಾಧಿಸಿದ್ದಾರೆ.

ಅವನಿಗೆ ನೀಡಿರುವ ಕೆಲವು ಶಿಕ್ಷೆ "ಅಮಾನವೀಯ ಮತ್ತು ಶಿಕ್ಷೆಯನ್ನು ಕೆಳಮಟ್ಟಕ್ಕೆ ಇಳಿಸುವಂತದ್ದು" ಎಂದು ಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ.

ಕೋರ್ಟ್ ತೀರ್ಪಿನ ನಂತರ ಬ್ರೆಯ್ವಿಕ್ ಪರ ವಕೀಲ ಆಯ್ಸ್ಟಿನ್ ಸ್ಟಾರ್ವಿಕ್ ತನ್ನ ಕಕ್ಷಿದಾರನಿಗೆ ನೀಡಿರುವ ಏಕಾಂತ ಸೆರೆಯನ್ನು ರದ್ದು ಮಾಡಲು ಕರೆ ನೀಡಿದ್ದಾರೆ.

ಬಲಪಂಥೀಯ ತೀವ್ರಗಾಮಿ ಬ್ರೆಯ್ವಿಕ್, ಜುಲೈ ೨೦೧೧ರಲ್ಲಿ ಎಡ ಮತ್ತು ಮಧ್ಯಮ ಸಿದ್ಧಾಂತದ ರಾಜಕೀಯ ಕಾರ್ಯಕರ್ತರಿಗೆ ನಡೆಸಸಲಾಗಿದ್ದ ಬೇಸಿಗೆ ಶಿಬಿರದಲ್ಲಿ ೬೯ ಜನರನ್ನು ಕೊಲೈಗೈದಿದ್ದಲ್ಲದೆ, ಆ ದಿನಕ್ಕೂ ಮುಂಚಿತವಾಗಿ ಆಸ್ಲಾದಲ್ಲಿ ಕಾರ್ ಬಾಂಬಿನಿಂದ ೮ ಜನರನ್ನು ಕೊಂದು ಹಾಕಿದ್ದ.

ನ್ಯಾಯಾಧೀಶೆ ಅಂಡೆನೇಸ್ ಸೆಕಿಲಿಕ್ ತಮ್ಮ ತೀರ್ಪಿನಲ್ಲಿ ಅಮಾನವೀಯ ಶಿಕ್ಷೆ ಸರಿಯಲ್ಲ, ಭಯೋತ್ಪಾದಕರು ಮತ್ತು ಕೊಲೆಗಾರರಿಗೂ ಪ್ರಜಾಪ್ರಭುತ್ವ ಸಮಾಜದ ಮೂಲಭೂತ ಮೌಲ್ಯಗಳು ಅನ್ವಯವಾಗುತ್ತವೆ ಎಂದಿದ್ದಾರೆ.

ತಮ್ಮನ್ನು ೨೨ ರಿಂದ ೨೩ ಘಂಟೆಗಳ ಕಾಲ ಏಕಾಂತ ಸೆರಮನೆಯಲ್ಲಿ ಕೂಡಿ ಹಾಕಿ, ಕೇವಲ ಜೈಲು ಅಧಿಕಾರಿಗಳ ಜೊತೆಗೆ ದೊಡ್ಡ ಗಾಜಿನ ತಡೆಗೋಡೆಯ ಮೂಲಕ ಮಾತ್ರ ಸಂಪರ್ಕಿಸಲು ಅವಕಾಶ ನೀಡಿರುವುದಕ್ಕೆ ಸರ್ಕಾರದ ವಿರುದ್ಧ ಬ್ರೆಯ್ವಿಕ್ ನ್ಯಾಯಾಲಯದ ಮೊರೆ ಹೋಗಿದ್ದರು.

ಇದಕ್ಕೆ ಪರಿಹಾರವಾಗಿ ಬ್ರೆಯ್ವಿಕ್ ಪರ ವಕೀಲರ ಖರ್ಚು ೪೦,೦೦೦ ಡಾಲರ್ ಕಟ್ಟುವಂತೆ ಕೋರ್ಟ್ ಸರ್ಕಾರಕ್ಕೆ ಸೂಚಿಸಿದೆ.

SCROLL FOR NEXT