ಕಳ್ಳಸಾಗಾಣೆಯಾದ ಬುದ್ಧನ ಪ್ರತಿಮೆಯನ್ನು ಪಾಕಿಸ್ತಾನಕ್ಕೆ ಹಿಂದಿರುಗಿಸಲಿರುವ ಅಮೆರಿಕಾ
ಪಾಕಿಸ್ತಾನದ ಸ್ವಾಟ್ ಕಣಿವೆಯಿಂದ ಅಮೆರಿಕಾಗೆ ಕಳ್ಳಸಾಗಾಣಿಕೆಯಾಗಿದ್ದ ವಿರಳ ಬುದ್ಧನ ಪ್ರತಿಮೆಯನ್ನು ಗುರುವಾರ ಹಿಂದಿರುಗಿಸಲಾಗುವುದು ಎಂದು ಪಾಕಿಸ್ತಾನ ಪತ್ರಿಕೆ
ಇಸ್ಲಾಮಾಬಾದ್: ಪಾಕಿಸ್ತಾನದ ಸ್ವಾಟ್ ಕಣಿವೆಯಿಂದ ಅಮೆರಿಕಾಗೆ ಕಳ್ಳಸಾಗಾಣಿಕೆಯಾಗಿದ್ದ ವಿರಳ ಬುದ್ಧನ ಪ್ರತಿಮೆಯನ್ನು ಗುರುವಾರ ಹಿಂದಿರುಗಿಸಲಾಗುವುದು ಎಂದು ಪಾಕಿಸ್ತಾನ ಪತ್ರಿಕೆ ವರದಿ ಮಾಡಿದೆ.
ಅಂದಾಜಿನ ಪ್ರಕಾರ ೧೯೮೦ರಲ್ಲಿ ಕಳವಾದ ಈ ಅಪರೂಪದ ಪ್ರತಿಮೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ೧.೧ ಮಿಲಿಯನ್ ಡಾಲರ್ ಬೆಲೆ ಬಾಳುತ್ತದೆ.
ಈ ಕಳ್ಳಸಾಗಾಣಿಕೆ ಪ್ರತಿಮೆಯನ್ನು ಹಿಂದಿರುಗಿಸುವ ಕಾರ್ಯಕ್ರಮವನ್ನು ನ್ಯೂಯಾರ್ಕ್ ನಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದೆ ಎಂದು ಡಾನ್ ಆನ್ಲೈನ್ ವರದಿ ಮಾಡಿದೆ.
ನ್ಯೂಯಾರ್ಕ್ ನ ಕಲಾ ಪ್ರದರ್ಶನದಲ್ಲಿ ಈ ಪ್ರತಿಮೆಯನ್ನು ಮಾರಾಟಕ್ಕೆ ಇಡಲಾಗಿತ್ತು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.