ಅಮೆರಿಕಾದ ಒಮಾಹಾದಲ್ಲಿ ಚುನಾವಣಾ ಪ್ರಚಾರ ನಡೆಸಲು ಆಗಮಿಸಿದ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮತ್ತು ಬಿಲಿಯನೇರ್ ವಾರೆನ್ ಬಫೆಟ್.
ಒಮಹಾ: ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಲು ಸಾಧ್ಯವಾದುದನ್ನೆಲ್ಲಾ ಮಾಡಲು ತಾನು ಸಿದ್ಧ ಎಂದು ಬಿಲಿಯನೇರ್ ಹೂಡಿಕೆದಾರ ವಾರೆನ್ ಬಫೆಟ್ ಹೇಳಿದ್ದಾರೆ. ಬೇಕಾದರೆ ಜನರನ್ನು ಮತದಾನಕ್ಕೂ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾರೆ.
ನಿನ್ನೆ ಅವರು ನೆಬ್ರಸ್ಕದಲ್ಲಿ ಹಿಲರಿ ಕ್ಲಿಂಟನ್ ಪರ ಪ್ರಚಾರ ನಡೆಸಿದರು. ಡೊನಾಲ್ಡ್ ಟ್ರಂಪ್ ಅವರ ವ್ಯವಹಾರ ದಾಖಲೆಗಳನ್ನು ಕಟುವಾಗಿ ಟೀಕಿಸಿದ ಅವರು, ಡೊನಾಲ್ಡ್ ರ ದಿವಾಳಿತನವನ್ನು ಪ್ರಶ್ನಿಸಿದರು. ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಯಾಕೆ ತೆರಿಗೆ ಪಾವತಿಯನ್ನು ಬಿಡುಗಡೆ ಮಾಡುವುದಿಲ್ಲ ಎಂದು ಕೇಳಿದರು.
ನಂತರ ಅವರು ಹೊಸ ಪ್ರಚಾರಕ್ಕೆ ಚಾಲನೆ ನೀಡಿದರು. ಅದಕ್ಕೆ ಡ್ರೈವ್ 2 ಮತದಾನ ಎಂದು ಹೆಸರಿಡಲಾಗಿದ್ದು, ಮತದಾರರನ್ನು ಮತ ಚಲಾಯಿಸಲು ಸೆಳೆಯುವುದಾಗಿದೆ.
ಸಾವಿರಾರು ಜನರು ಸೇರಿದ್ದ ಒಮಹಾ ಹೈಸ್ಕೂಲ್ ನಲ್ಲಿ ಟ್ರಂಪ್ ಗೆ ಸವಾಲೆಸೆದ ಬಫೆಟ್, ಒಂದೆಡೆ ಸಭೆ ಸೇರಿ ತೆರಿಗೆ ಪಾವತಿಯನ್ನು ಬಿಡುಗಡೆ ಮಾಡೋಣ ಎಂದು ಡೊನಾಲ್ಡ್ ಟ್ರಂಪ್ ಗೆ ಸವಾಲೆಸೆದರು.