ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್(ಎಡ) ಮತ್ತು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್(ಬಲ) (ಸಂಗ್ರಹ ಚಿತ್ರ)
ವಾಷಿಂಗ್ಟನ್: ಇತ್ತೀಚಿನ ವರದಿ ಪ್ರಕಾರ, ಅಮೆರಿಕ ಅಧ್ಯಕ್ಷ ಪದವಿಯ ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ತಮ್ಮ ಪ್ರತಿಸ್ಪರ್ಧಿ ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಂದ ಶೇಕಡಾ 15 ಮತಗಳಿಂದ ಮುಂದಿದ್ದಾರೆ.
ಹಿಲರಿ ಕ್ಲಿಂಟನ್ ಅವರಿಗೆ ಶೇಕಡಾ 48ರಷ್ಟು ಮತಗಳಿದ್ದರೆ, ಡೊನಾಲ್ಡ್ ಟ್ರಂಪ್ ಅವರಿಗೆ ಶೇಕಡಾ 33ರಷ್ಟು ಮತಗಳ ಬೆಂಬಲವಿದೆ ಎಂದು ಮೆಕ್ ಕ್ಲಾಚಿ-ಮರಿಸ್ಟ್ ಮತದಾನ ಸಮೀಕ್ಷೆ ತಿಳಿಸಿದೆ.
ಇನ್ನೊಂದೆಡೆ ವಾಲ್ ಸ್ಟ್ರೀಟ್ ಜರ್ನಲ್/ಎನ್ ಬಿಸಿ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ ಹಿಲರಿ ಕ್ಲಿಂಟನ್ ಡೊನಾಲ್ಡ್ ಟ್ರಂಪ್ ಅವರಿಗಿಂತ 9 ಅಂಕಗಳಿಂದ ಮುಂದಿದ್ದಾರೆ.
ಕ್ಲಿಂಟನ್ ಅವರಿಗೆ ಮಹಿಳೆಯರ ಮತ ಹೆಚ್ಚು ಬಿದ್ದಿದೆ. ಅವರಿಗೆ ಮಹಿಳೆಯರು ಶೇಕಡಾ 51ರಷ್ಟು ಬೆಂಬಲ ಸೂಚಿಸಿದರೆ ಡೊನಾಲ್ಡ್ ಟ್ರಂಪ್ ಗೆ ಶೇಕಡಾ 35ರಷ್ಟು ಮಹಿಳೆಯರ ಬೆಂಬಲ ಸಿಕ್ಕಿದೆ. ಪುರುಷರ ಮತ ಬೆಂಬಲದಲ್ಲಿ ಕ್ಲಿಂಟನ್ ಗೆ ಶೇಕಡಾ 43ರಷ್ಟು ಮತ್ತು ಟ್ರಂಪ್ ಗೆ ಶೇಕಡಾ 42ರಷ್ಟು ಬೆಂಬಲ ಸಿಕ್ಕಿದೆ.
ಅಮೆರಿಕದ ಪ್ರಮುಖ ರಾಷ್ಟ್ರ ಚುನಾವಣೆಯ ಬಗ್ಗೆ ಗಮನಹರಿಸುವ ರಿಯಲ್ ಕ್ಲಿಯರ್ ಪೊಲಿಟಿಕ್ಸ್ ಪ್ರಕಾರ, ಹಿಲರಿ ಕ್ಲಿಂಟನ್ ಅವರು ಡೊನಾಲ್ಡ್ ಟ್ರಂಪ್ ಅವರಿಗಿಂತ ಸರಾಸರಿ ಶೇಕಡಾ 6.8 ರಷ್ಟು ಮತಗಳ ಬೆಂಬಲದಿಂದ ಮುಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics