ವಿದೇಶ

ಕಾಶ್ಮೀರದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲು 'ಗಡಿ ರಹಿತ ವೈದ್ಯರು'ಗಳಿಗೆ ಪಾಕಿಸ್ತಾನದ ಮನವಿ

Srinivas Rao BV

ಇಸ್ಲಾಮಾಬಾದ್: ಕಾಶ್ಮೀರದ ಕಣಿವೆ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಗಾಯಗೊಂಡ ನಾಗರಿಕರಿಗೆ ಸೂಕ್ತ ಚಿಕಿತ್ಸೆ ಒದಗಿಸುವಂತೆ ಪಾಕಿಸ್ತಾನ ಗಡಿ ರಹಿತ ವೈದ್ಯರೆಂದೇ ಗುರುತಿಸಲ್ಪಡುವ ಮೆಡಿಸಿನ್ಸ್ ಸಾನ್ಸ್ ಫ್ರಾಂಟಿಯರ್ಸ್(ಎಂ ಎಸ್ ಎಫ್) ಗೆ ಮನವಿ ಮಾಡಿದೆ.

ಪಾಕಿಸ್ತಾನ ಪ್ರಧಾನಿಯ ವಿದೇಶಾಂಗ ಸಲಹೆಗಾರ ಸರ್ತಾಜ್ ಅಜೀಜ್ ಎಂಎಸ್ ಎಫ್ ಗೆ ಪಾತ್ರ ಬರೆಯುವ ಮೂಲಕ ಕಾಶ್ಮೀರದಲ್ಲಿ ಗಾಯಗೊಂಡಿರುವ ನಾಗರಿಕರಿಗೆ ಚಿಕಿತ್ಸೆ ಕೊಡಿಸುವ ವಿಷಯವಾಗಿ ಔಪಚಾರಿಕವಾಗಿ ಮನವಿ ಮಾಡಿದ್ದಾರೆ. ನಿಶಸ್ತ್ರ ಹಾಗೂ ರಕ್ಷಣೆ ಇಲ್ಲ ನಾಗರಿಕರ ಮೇಲೆ ಭಾರತ ತೋರಿದ ಕ್ರೌರ್ಯದಿಂದ ಕಾಶ್ಮೀರದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ ಎಂದು ಪಾಕಿಸ್ತಾನ ತನ್ನ ಪಾತ್ರದಲ್ಲಿ ಎಂಎಸ್ ಎಫ್ ನ ಅಂತಾರಾಷ್ಟ್ರೀಯ ಅಧ್ಯಕ್ಷರಿಗೆ ತಿಳಿಸಿದೆ.

ಕಣ್ಣಿನ ತಜ್ಞರ ಅಗತ್ಯತೆಯನ್ನು ಒತ್ತಿ ಹೇಳಿರುವ ಪಾಕಿಸ್ತಾನ, ಭಾರತೀಯ ಸೇನೆ ಕಾಶ್ಮೀರದ ಪ್ರತಿಭಟನಾ ನಿರತರ ಮೇಲೆ ಪೆಲ್ಲೆಟ್ ಗನ್ ಗಳನ್ನೂ ಬಳಕೆ ಮಾಡಿರುವುದರಿಂದ ನೂರಾರು ಜನರು ಕಣ್ಣಿನ ಸಮಸ್ಯೆಗೆ ಗುರಿಯಾಗಿದ್ದಾರೆ ಎಂದು ಹೇಳಿದ್ದಾರೆ.

SCROLL FOR NEXT