ಕ್ಯಾಥಲೀನ್ ಮ್ಯಾರಿ ಸ್ಟೀಲ್ 
ವಿದೇಶ

ಶಾಪಿಂಗ್ ಗೆ ತೆರಳಿದ್ದ ಅಮ್ಮ: 13 ದಿನದ ಸಹೋದರಿಯನ್ನು ಕೊಂದ 6 ವರ್ಷದ ಬಾಲಕ

6 ವರ್ಷದ ಬಾಲಕ 13 ದಿನದ ಸಹೋದರಿಯನ್ನು ಥಳಿಸಿ ಕೊಂದಿರುವ ಘಟನೆ ಪಶ್ಚಿಮ ಫ್ಲೋರಿಡಾದಲ್ಲಿ ನಡೆದಿದೆ.

ಮಿಯಾಮಿ:  6 ವರ್ಷದ ಬಾಲಕ 13 ದಿನದ ಸಹೋದರಿಯನ್ನು ಥಳಿಸಿ ಕೊಂದಿರುವ ಘಟನೆ ಪಶ್ಚಿಮ ಫ್ಲೋರಿಡಾದಲ್ಲಿ ನಡೆದಿದೆ.

62 ವರ್ಷದ ಮಹಿಳೆ ಕ್ಯಾಥಲೀನ್ ಮ್ಯಾರಿ ಸ್ಟೀಲ್ ತನ್ನ 6 ವರ್ಷದ ಮಗನೊಂದಿಗೆ 13 ದಿನದ ಶಿಸುವನ್ನು ವ್ಯಾನ್ ನಲ್ಲಿ ಬಿಟ್ಟು, ಸುಮಾರು ಅರ್ಧ ಗಂಟೆಗೂ ಕಾಲ ಶಾಪಿಂಗ್ ಗೆ ತೆರಳಿದ್ದಳು. ಈ ವೇಳೆ 6 ವರ್ಷದ ಬಾಲಕ ಮಗುವಿಗೆ ಹೊಡೆದು ಸಾಯಿಸಿದೆ. ನರಹತ್ಯೆ ಮತ್ತು ಹಾಗೂ ನವಜಾತ ಶಿಶುವನ್ನು ನೋಡಿಕೊಳ್ಳುವಲ್ಲಿ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ  ಜಾಮೀನು ನೀಡಲು  ನ್ಯಾಯಾಲಯ 10,000 ಡಾಲರ್ ದಂಡ ವಿಧಿಸಿದೆ.

ಕ್ಯಾಥಲೀನ್ ಸ್ಟೀಲ್ ತನ್ನ ಮೃತ ಗಂಡನ ವೀರ್ಯಾಣು ಬಳಸಿ, ಕೃತಕ ಗರ್ಭಧಾರಣೆ ಮೂಲಕ 3ನೇ ಮಗುವನ್ನು ಪಡೆದಿದ್ದಳು. ಮಿನಿ ವ್ಯಾನ್ ನಲ್ಲಿ ತನ್ನ ಆರು ವರ್ಷದ ಮಗ, ಮೂರು ವರ್ಷದ ಮತ್ತೊಂದು ಮಗು ಹಾಗೂ 13 ದಿನಗಳ ನವಜಾತ ಶಿಶುವನ್ನು ಬಿಟ್ಟು ಸುಮಾರು ಅರ್ಧಗಂಟೆಗೂ ಹೆಚ್ಚಿನ ಕಾಲ ಶಾಪಿಂಗ್ ತೆರಳಿದ್ದಳು, ಈ ವೇಳೆ ವ್ಯಾನ್ ನ ಎಲ್ಲಾ ಕಿಟಕಿಗಳನ್ನು ಮುಚ್ಚಲಾಗಿತ್ತು.
ಮಗು ಅಳಲು ಆರಂಭಿಸಿದೆ ಈ ವೇಳೆ  ಮಗುವನ್ನು ಸೀಟ್ ಬೆಲ್ಟ್ ನಿಂದ ಎತ್ತುಕೊಂಡ 6 ವರ್ಷದ ಪ್ರ್ಯಾಂಕಿ ಸಮಾಧಾನ ಪಡಿಸಲು ಯತ್ನಿಸಿದ್ದಾನೆ. ಮಗುವನ್ನು ಎತ್ತಿ ಹಿಂದೆ ಮುಂದೆ ಆಡಿಸಿದ್ದಾನೆ, ನಂತರ ಕಾರಿನ ಸೀಲಿಂಗ್ ಗೆ ತಲೆ ಹೊಡೆಸಿದ್ದಾನೆ. ಜೊತೆಗೆ ಮೇಲಿಂದ ಮಗುವನ್ನು ಕೆಳಗೆ ಬಿಟ್ಟಿದ್ದಾನೆ. ಈ ವೇಳೆ ಮಗುವಿನ ಮುಖಕ್ಕೆ ಗಾಯವಾಗಿ ಮಗು ಆಘಾತಗೊಂಡಿದೆ.

ಸ್ಟೀಲ್ ಅಂಗಡಿಯಿಂದ ವಾಪಸ್ ಬಂದ ಮೇಲೆ ತನ್ನ ಮಗ ಮಗುವಿನ ವಿಷಯ ಹೇಳಿದ್ದಾನೆ, ಆದರೆ ಅದಕ್ಕೆ ಗಮನ ಕೊಡದ ಆಕೆ ತನ್ನ ಉದ್ದೇಶಿತ ಕೆಲಸವನ್ನು ಪೂರ್ಣಗೊಳಿಸಿಯೇ ಹೋಗುವುದಾಗಿ ತಿಳಿಸಿದ್ದಾಳೆ.  ಇದಾದ 2 ಗಂಟೆಯ ನಂತರ ಸ್ಟೀಲ್ ಮಕ್ಕಳ ಜೊತೆ ಮನೆಗೆ ತೆರಳಿದ್ದಾಳೆ. ಮಗು ಮೈ ಬಣ್ಣ ನೀಲಿ ಬಣ್ಣಕ್ಕೆ ತಿರುಗಿ ತಣ್ಣಗಾಗಿತ್ತು. ಕೂಡಲೇ ಆಕೆ ತನ್ನ ಮನೆಯ ಪಕ್ಕದ ನರ್ಸ್ ಬಳಿ ಕರೆದೊಯ್ದಿದ್ದಾಳೆ, ಅಲ್ಲಿಂದ ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಮಗು ಸತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ತಾನು ಮಗುವನ್ನು ಬೊಂಬೆಯಂತೆ ಆಟವಾಡಿಸಿದ್ದೇ ಎಂದು ಆರು ವರ್ಷಶದ ಪ್ರಾಂಕ್ಲಿ ಪೊಲೀಸರ ಬಳಿ ಹೇಳಿದ್ದಾನೆ. ಕ್ಯಾಥಲೀನ್ ಒಬ್ಬ ಬೇಜವ್ದಾರಿಯುತ ಪೋಷಕಳಾಗಿದ್ದಳು. ಹೀಗಾಗಿ ಹಿರಿಯ ಮಗ ಪ್ರಾಂಕ್ಲಿನ್ ಹಲವು ಸಮಸ್ಯೆಗಳನ್ನು ಹೊಂದಿದ್ದ ಎಂದು ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel